ಕುಂಬಳೆ: ನಿವೃತ್ತ ಮುಖ್ಯೋಪಾಧ್ಯಾಯ, ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ, ಸಾಧಕ ಎಚ್.ವಿಷ್ಣು ಭಟ್ ಅವರ ಕುರಿತು ರಚಿಸಿರುವ ಸಂಸ್ಮರಣಾ ಸಂಪುಟ ‘ಕಾಯಕ ತಪಸ್ವಿ ವಿಷ್ಣು ಮಾಸ್ಟ್ರು’ ಕೃತಿ ಬಿಡುಗಡೆ ಇಂದು(ಡಿ.8) ಅಪರಾಹ್ನ 3.30 ರಿಂದ ಸೂರಂಬೈಲಿನ ಎಡನಾಡು-ಕಣ್ಣುರು ಸೇವಾ ಸಹಕಾರಿ ಬ್ಯಾಂಕಿನ ಸಮನ್ವಯ ಸಭಾ ಭವನದಲ್ಲಿ ನಡೆಯಲಿದೆ.
ಖ್ಯಾತ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಯಕ್ಷಗಾನ ಪ್ರಸಂಗಕರ್ತ, ಭಾಗವತ ಶೇಡಿಗುಮ್ಮೆ ವಾಸುದೇವ ಭಟ್ ಬಿಡುಗಡೆಗೊಳಿಸುವರು.ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಡಾ.ಹರಿಕೃಷ್ಣ ಭರಣ್ಯ ಕೃತಿ ಪರಿಚಯ ನೀಡುವರು. ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಚ್.ಶಿವರಾಮ ಭಟ್. ಹಾಗೂ ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎಚ್.ಶಂಕರನಾರಾಯಣ ಭಟ್ ಶುಭಶಂಸನೆಗೈಯ್ಯುವರು. ಕೃತಿ ಸಂಪಾದಕ ಎಸ್.ಕೆ.ಗೋಪಾಲಕೃಷ್ಣ ಭಟ್ ಮಾತನಾಡುವರು.