ಚೆಂಗನ್ನೂರು: ವಿಶ್ವ ಹಿಂದೂ ಪರಿಷತ್ ಕೇರಳ ಘಟಕವು 20 ದಿನಗಳಲ್ಲಿ ಚೆಂಗನ್ನೂರು ರೈಲು ನಿಲ್ದಾಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರಿಗೆ ಅನ್ನಸಂತರ್ಪಣೆ ಮಾಡಿದೆ.
ಪ್ರಸ್ತುತ ಚೆಂಗನ್ನೂರು ಅಯ್ಯಪ್ಪ ಸೇವಾ ಕೇಂದ್ರವು ಕೇರಳದ ಅತ್ಯಂತ ಉಪಯುಕ್ತ ಸೇವಾ ಕೇಂದ್ರಗಳಲ್ಲಿ ಒಂದಾಗಿದೆ.
ರಾಜ್ಯದ ವಿವಿಧೆಡೆಯಿಂದ ಬಂದಿರುವ ಪರಿಷತ್ ಕಾರ್ಯಕರ್ತರು ಸೇವಾ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಯ ಲೆಕ್ಕಿಸದೆ ಬರುವವರಿಗೆಲ್ಲ ಊಟ ಬಡಿಸಲು ಸೇವಾ ಕೇಂದ್ರವು ವಿಸ್ತಾರವಾದ ವ್ಯವಸ್ಥೆಯನ್ನು ಹೊಂದಿದೆ. ನವೆಂಬರ್ 30 ರಂದು ಕಾರ್ಯಾರಂಭ ಮಾಡಿದ ಸೇವಾ ಕೇಂದ್ರದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಜನರಿಗೆ ವಿವಿಧ ಸಮಯಗಳಲ್ಲಿ ಅನ್ನಸಂತರ್ಪಣೆ ಮಾಡಲಾಗುತ್ತದೆ.
ಕೇಂದ್ರದಲ್ಲಿ 500 ಜನರಿಗೆ ಅವಕಾಶ ಕಲ್ಪಿಸಲು, ಮೂಲಭೂತ ಸೌಕರ್ಯಗಳನ್ನು ನಿರ್ವಹಿಸಲು, ಸರಕುಗಳನ್ನು ಸಂಗ್ರಹಿಸಲು ಮತ್ತು ವಾಹನಗಳನ್ನು ಕಾಯ್ದಿರಿಸಲು ಸೌಲಭ್ಯಗಳಿವೆ. ವಿಎಚ್‍ಪಿ ರಾಜ್ಯ ಪ್ರ. ಕಾರ್ಯದರ್ಶಿ ವಿ.ಆರ್. ರಾಜಶೇಖರನ್ ಮತ್ತು ಜೊತೆ. ಕಾರ್ಯದರ್ಶಿ ಅಡ್ವ. ಅನಿಲ್ ವಾಲಾ ಈ ಬಗ್ಗೆ ಮಾಹಿತಿ ನೀಡಿದರು.