HEALTH TIPS

ಮಹಾಕುಂಭ 'ಏಕತೆಯ ಮಹಾಯಜ್ಞ': ಪ್ರಯಾಗರಾಜ್‌ನಲ್ಲಿ ಹಲವು ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಯಾಗ್‌ರಾಜ್: ಮಹಾ ಕುಂಭ 2025, ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ "ಐಕ್ಯತೆಯ ಮಹಾಯಜ್ಞ" ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಇಂದು ನಗರದ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಕುಂಭಮೇಳದ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಲು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಸಾಮಾಜಿಕ ಒಗ್ಗಟ್ಟು ಮತ್ತು ಸಮುದಾಯಗಳ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಮಹಾ ಕುಂಭಮೇಳದ ಪಾತ್ರವನ್ನು ಒತ್ತಿ ಹೇಳಿದರು.

5,500 ಕೋಟಿ ರೂಪಾಯಿ ಮೌಲ್ಯದ 167 ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ, ಮಹಾ ಕುಂಭದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಸಂವಹನವನ್ನು ಸುವ್ಯವಸ್ಥಿತಗೊಳಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಕುಂಭ ಸಹಾಯಾಕ್ ಚಾಟ್‌ಬಾಟ್‌ಗಳನ್ನು ಬಳಸಲಾಗುವುದು ಎಂದರು.

ಪ್ರತಿ 12 ವರ್ಷಗಳಿಗೊಮ್ಮೆ ಮಹಾಕುಂಭವನ್ನು ಆಯೋಜಿಸುವ ಪ್ರಯಾಗ್‌ರಾಜ್ ನಗರವು ಕೇವಲ ಭೌಗೋಳಿಕ ಸ್ಥಳವಲ್ಲ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮವಾಗಿದೆ. ಇದು ಜನರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಆಧ್ಯಾತ್ಮಿಕ ಅನುಭವದ ಸ್ಥಳವಾಗಿದೆ ಎಂದು ಮೋದಿ ಹೇಳಿದರು.

ಮಹಾ ಕುಂಭವು ಏಕತೆಯ ಮಹಾಯಜ್ಞವಾಗಿದೆ. ಇದು ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದು ವಿಶ್ವಾದ್ಯಂತ ಚರ್ಚಿಸಲ್ಪಡುವ ಏಕತೆಯ ಮಹಾಯಜ್ಞ(ಭಕ್ತಿಯ ಮಹಾ ಕಾರ್ಯ) ಆಗಲಿದೆ ಎಂದರು.

ಭಾರತವು ಪವಿತ್ರ ಸ್ಥಳಗಳು ಮತ್ತು ತೀರ್ಥಯಾತ್ರೆಗಳ ದೇಶವಾಗಿದೆ. “ಮಹಾ ಕುಂಭವು ಯಾವುದೇ ಬಾಹ್ಯ ವ್ಯವಸ್ಥೆಯ ಬದಲಿಗೆ ಮನುಷ್ಯನ ಆಂತರಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಕ್ತಿ, ಧರ್ಮ ಮತ್ತು ಸಂಸ್ಕೃತಿಯ ದೈವಿಕ ಸಹಭಾಗಿತ್ವವನ್ನು ಒದಗಿಸುವ ಘಟನೆಯಾಗಿದೆ ”ಎಂದು ಮೋದಿ ಹೇಳಿದರು.

2025 ರ ಮಹಾ ಕುಂಭಮೇಳವು ಜನವರಿ 13 ರಿಂದ ಫೆಬ್ರವರಿ 26 (ಮಹಾ ಶಿವರಾತ್ರಿ) ವರೆಗೆ ಪ್ರಯಾಗರಾಜ್‌ನಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries