ನ್ಯೂ ಬಾಟಲ್ ಓಲ್ಡ್ ವೈನ್ ಎಂಬ ಗಾದೆಯಂತೆ ಈ ಫ್ಯಾಷನ್ ಕೂಡ, ಹಳೆಯ ಫ್ಯಾಷನ್‌ಗಳು ಹೊಸ ಟ್ರೆಂಡ್ ಆಗಿ ಬದಲಾಗುವುದನ್ನು ನೋಡುತ್ತೇವೆ, ಅದು ಡ್ರೆಸ್ ಆಗಿರಲಿ, ಆಭರಣ ಆಗಿರಲಿ. ನೀವು ಸೀರೆ, ಬ್ಲೌಸ್ ಡಿಸೈನ್ ಎಲ್ಲಾ ಗಮನಿಸಿರಬಹುದು 80, 90ರ ಡಿಸೈನ್‌ಗಳು ಇನ್ನಷ್ಟು ನವೀಕರಣಗೊಂಡು ಬದಲಾಗುವುದು. ಅದರಂತೆ ಆಭರಣಗಳ ಫ್ಯಾಷನ್.
ಆಭರಣಗಳಲ್ಲಿಯೂ ಕೆಲವೊಂದು ಟ್ರೆಂಡ್ ಕಾಣಬಹುದು, ಅದು ನೆಕ್ಲೆಸ್ ಆಗಿರಬಹುದು, ಕಿವಿಯೋಲೆ ಆಗಿರಬಹುದು. ಇತ್ತೀಚೆಗೆ ನೀವು ಗಮನಿಸಿರಬಹುದು ಮಾಟಿ ಟ್ರೆಂಡ್ ಗಮನ ಸೆಳೆಯುತ್ತಿದೆ. ಸೆಲೆಬ್ರಿಟಿಗಳ ಸಮಾರಂಭ, ಸಂದರ್ಶನಗಳಿಗೆ ಬರುವಾಗ ದೊಡ್ಡ ಕಿವಿಯೋಲೆ ಅದಕ್ಕೆ ಮಾಟಿ ಧರಿಸಿ ಬಂದಿರುತ್ತಾರೆ, ಮದುವೆ ಸಮಾರಂಭಗಳಲ್ಲಿಯೂ ಮಾಡಿ ಧರಿಸುವ ಫ್ಯಾಷನ್ ಆಗಿದೆ.
ಮಾಟಿ ಹೊಸ ಫ್ಯಾಷನ್ ಆಗಿ ಮತ್ತೆ ಬಂದಿದೆ, ಎಷ್ಟೋ ಜನ ತಮ್ಮ ಮದುವೆಯಲ್ಲಿ ಮಾಡಿಸಿದ ಮಾಟಿಗಳನ್ನು ಔಟ್ ಆಫ್ ಫ್ಯಾಷನ್ ಆಯ್ತು ಎಂದು ಕೊಟ್ಟು ಬೇರೆ ಆಭರಣ ಮಾಡಿಸಿದ್ದಾರೆ, ಅಂಥವರು ಛೇ ನನ್ನ ಬಳಿಯಿದ್ದ ಮಾಟಿ ಕೊಡಬಾರದಿತ್ತು ಎಂದು ಯೋಚಿಸುವ ರೀತಿಯಲ್ಲಿ ಮಾಟಿ ಫ್ಯಾಷನ್ ಮರಳಿ ಬಂದಿದೆ.
ಟ್ರೆಡಿಷನ್ ಲುಕ್‌ನ ಮೆರಗು ಹೆಚ್ಚಿಸುವ ಮಾಟಿ
ಸೀರೆ, ಗ್ರ್ಯಾಂಡ್ ಸೆಲ್ವಾರ್, ಸ್ಕರ್ಟ್ ಅಂಡ್ ಬ್ಲೌಸ್ ಇವುಗಳನ್ನು ಧರಿಸಿದಾಗ ಈ ಮಾಡಿ ಧರಿಸಿದರೆ ಸಕತ್ ರಿಚ್ ಲುಕ್ ನೀಡುತ್ತಿದೆ. ಈ ಮಾಟಿ ಫ್ರೀ ಹೇರ್‌ಗೂ ಸೂಪರ್, ಬನ್ (ತುರುಬು) ಹೇರ್ ಸ್ಟೈಲ್‌ಗೂ ಸರಿ.
ಸಿಂಪಲ್, ಗ್ರ್ಯಾಂಡ್ ಹೀಗೆ ಅನೇಕ ಬಗೆಯ ಮಾಟಿಗಳು ಗಮನ ಸೆಳೆಯುತ್ತಿದೆ
ಒಂದೆಳೆಯ ಮಾಟಿ, ಎರಡು-ಮೂರೆಳೆಯ ಮಾಟಿ ಈಗ ಟ್ರೆಂಡ್‌ನಲ್ಲಿದೆ,ಒಂದೆಳೆ ಮಾಟಿಗಿಂತ ಎರಡು-ಮೂರೆಳೆಯ ಮಾಟಿ ಎಲ್ಲರ ಫೇವರೆಟ್ ಆಗಿ. ಈ ಮಾಟಿ ಒಂದಕ್ಕಿಂತ ಹೆಚ್ಚು ಎಳೆ ಇದ್ದರೆ ನಮ್ಮ ಮುಖಕ್ಕೆ ತುಂಬಾನೇ ಆಕರ್ಷಕ ಅನಿಸುವುದು.
ಹೆವಿ ವರ್ಕ್ಸ್ ಜ್ಯೂವೆಲರಿ ಹೆಚ್ಚು ಮಾರಾಟವಾಗುತ್ತಿದೆ
ಮಾಟಿಯಲ್ಲಿ ಯಾರೂ ಸಿಂಪಲ್ ಡಿಸೈನ್ ಇಷ್ಟಪಡುತ್ತಿಲ್ಲ, ಹೆವಿ ವರ್ಕ್ಸ್ ಡಿಸೈನ್ ತುಂಬಾನೇ ಇಷ್ಟಪಡುತ್ತಿದ್ದಾರೆ. ಅಲ್ಲದೆ ಅದರ ವರ್ಕ್ಸ್ ಸ್ವಲ್ಪ ಹೆವಿಯಿದ್ದರೆ ತುಂಬಾನೇ ಗ್ರ್ಯಾಂಡ್ ಲುಕ್ ನೀಡುವುದರಿಂದ ಎಲ್ಲರೂ ಇದನ್ನು ಧರಿಸಲು ಇಷ್ಟಪಡುತ್ತಾರೆ.
ಸ್ಟೋನ್ ಅಥವಾ ಪರ್ಲ್ ವರ್ಕ್ಸ್ ತುಂಬಾನೇ ಆಕರ್ಷಕವಾಗಿ ಕಾಣುವುದು
ಸ್ಟೋನ್ ಅಥವಾ ಪರ್ಲ್ (ಮುತ್ತಿನ ಡಿಸೈನ್) ಮಾಟಿ ತುಂಬಾನೇ ಆಕರ್ಷಕವಾಗಿ ಕಾಣುವುದು, ಮುತ್ತಿನ ಡಿಸೈನ್‌ಗಳು ತುಂಬಾನೇ ಆಕರ್ಷಕವಾಗಿ ಕಾಣುವುದು. ಹಾಗಾಗಿ ತುಂಬಾ ಜನ ಮುತ್ತಿನ ಡಿಸೈನ್‌ನಲ್ಲಿ ಮಾಟಿ ಖರೀದಿಸಲು ಇಷ್ಟಪಡುತ್ತಾರೆ.
ಮಾಟಿ ಧರಿಸಿದ ಮೇಲೆ ಹೆವಿ ನೆಕ್ಲೆಸ್ ಅವಶ್ಯಕತೆಯೂ ಇಲ್ಲ
ನೀವು ದೊಡ್ಡ ಕಿವಿಯೋಲೆ ಮತ್ತು ಮಾಟಿ ಧರಿಸಿದರೆ ದೊಡ್ಡ ನೆಕ್ಲೆಸ್ ಕೂಡ ಬೇಕಾಗಿಲ್ಲ. ಆದರೂ ರಿಚ್ ಲುಕ್ ನೀಡುವುದು. ಈ ಮಾಟಿ ನಿಮಗೆ ಸಾಂಪ್ರದಾಯಕ ಸೀರೆಗೆ ಮಾತ್ರವಲ್ಲ ಮಾಡರ್ನ್ ಡ್ರೆಸ್‌ಗೂ ತುಂಬಾನೇ ಚೆನ್ನಾಗಿ ಕಾಣಿಸುವುದು.
ಚಿನ್ನ ಮಾತ್ರವಲ್ಲ ಬೆಳ್ಳಿ ಕಲೆಕ್ಷನ್‌ನಲ್ಲಿಯೂ ಮಾಟಿಗಳು ದೊರೆಯುತ್ತಿವೆ
ಚಿನ್ನ ಮಾತ್ರವಲ್ಲ ಅತ್ಯಾಕರ್ಷಕ ಬೆಳ್ಳಿ ಕಲೆಕ್ಷನ್ ಮಾಟಿಕೂಡ ಮಾರುಕಟ್ಟೆಯಲ್ಲಿವೆ, ಹಾಗಾಗಿ ನಿಮಗೂ ಒಂದು ಮಾಟಿ ಕಲೆಕ್ಷನ್ ಬೇಕೆಂದು ಅನಿಸಿದರೆ ಗೋಲ್ಡ್ ಬದಲಿಗೆ ಬೆಳ್ಳಿ ಮಾಟಿ ಕೂಡ ಖರೀದಿಸಬಹುದು.