HEALTH TIPS

ಭಯೋತ್ಪಾದಕರಿಗೆ ಆಶ್ರಯತಾಣವಾಗಿ ಬದಲಾಗುತ್ತಿರುವ ಕಾಸರಗೋಡು -ಹಿಂದೂ ಐಕ್ಯವೇದಿ

ಕಾಸರಗೋಡು: ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಸದಸ್ಯ ಶಾಬ್‍ಶೇಖ್ ನನ್ನು ಕಾಞಂಗಾಡು ಸನಿಹದ ಪಡನ್ನದಿಂದ ಅಸ್ಸಾಂ ಪೆÇಲೀಸರು ಬಂಧಿಸಿರುವ ಪ್ರಕರಣದಲ್ಲಿ ಈತನಿಗೆ ಸಹಾಯ ಒದಗಿಸಿದವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸುವಂತೆ ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಆಗ್ರಹಿಸಿದ್ದಾರೆ. ಅವರು ಹಿಂದೂ ಐಕ್ಯವೇದಿ ಜಿಲ್ಲಾ ಸಮಿತಿ ಸಮಾವೇಶದಲ್ಲಿ ಮಾತನಾಡಿದರು.

ಕಟ್ಟರ್ ಉಗ್ರಗಾಮಿಯೊಬ್ಬನನ್ನು ಪಡನ್ನದಿಂದ ಬಂಧಿಸಿರುವ ಕ್ರಮದಿಂದ  ಜಿಲ್ಲೆಯ ಎಲ್ಲ ಶಾಂತಿಪ್ರಿಯ ಜನರನ್ನು ಆತಂಕಕ್ಕೀಡುಮಾಡಿದೆ. 2018ರಿಂದ ಕಾಞಂಗಾಡ್‍ನಲ್ಲಿ ಹಿಂದೂ ಮುಖಂಡರು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ನೆಲೆಸಿರುವ ಈ ಭಯೋತ್ಪಾದಕನ ಬಗ್ಗೆ ಜಿಲ್ಲಾಡಳಿತ ಅಥವಾ ಕೇರಳ ಪೆÇಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂಬುದು ಸತ್ಯಕ್ಕೆ ದೂರಾದುದು ಮಾತ್ರವಲ್ಲ ದುರಾದೃಷ್ಟಕರ 

ಭಯೋತ್ಪಾದಕನನ್ನು ಬಂಧಿಸಿದ ಮಾತ್ರಕ್ಕೆ ಸಮಸ್ಯೆ ಮುಗಿಯುವುದಿಲ್ಲ, ಕಾಸರಗೋಡು ಜಿಲ್ಲೆಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವವರ ಸಂಖ್ಯೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ವರ್ಷಗಳಿಂದೀಚೆಗೆ ನೆಲೆಸಿರುವ ಉಗ್ರರಿಗೆ ಸಹಾಯ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಕಾನೂನಿನ ಮುಂದೆ ತರಬೇಕು. ಇವರಲ್ಲಿ ಕಾಸರಗೋಡು ಜಿಲ್ಲೆಯ ಕೆಲವು ಸರ್ಕಾರಿ ನೌಕರರು ಶಾಮೀಲಾಗಿರುವ ಬಗ್ಗೆ ಮಾಹಿತಿಯಿದ್ದು  ಈ ಬಗ್ಗೆ ತನಿಖೆ ನಡೆಸಬೇಕು.

ಆಧಾರ್ ಕಾರ್ಡ್‍ಗಳನ್ನು ಪರಿಶೀಲಿಸಿ ಮತ್ತು ಅಪರಾಧ ಪ್ರಕರಣದ ಆರೋಪಿಗಳನ್ನು ಗುರುತಿಸಲು ಆಯಾ ಪೆÇಲೀಸ್ ಠಾಣೆಗಳ ಮೂಲಕ ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಈ ಮೂಲಕ ಕಾಸರಗೋಡು ಜಿಲ್ಲೆ ಮತ್ತೊಂದು ಬಾಂಗ್ಲಾದೇಶವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.  ಜಿಲ್ಲಾಧ್ಯಕ್ಷ ಎಸ್.ಪಿ ಶಾಜಿ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭ 'ಜಿಲ್ಲೆಯಲ್ಲಿ ಭಯೋತ್ಪಾದನೆ ಇಂದು-ನಿನ್ನೆ'ಎಂಬ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಹಿಂದೂ ಐಕ್ಯ ವೇದಿ ಜಿಲ್ಲಾ ರಕ್ಷಣಾಧಿಕಾರಿ ಗೋವಿಂದನ್ ಮಾಸ್ಟರ್ ಕೊಟ್ಟೋಡಿ,  ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ತಚ್ಚಂಗಾಡ್, ಜಿಲ್ಲಾ ಕಾರ್ಯದರ್ಶಿ ಮೋಹನನ್ ವಾಯಕ್ಕಾಡ್ ಪಾಲ್ಗೊಂಡಿದ್ದರು. ಮಹಿಳಾ ಐಕ್ಯವೇದಿ ರಾಜ್ಯ ಕೋಶಾಧಿಕಾರಿ ಓಮನಾ ಮುರಳಿ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರ ಕೊಳ್ಳಿಕ್ಕಾಡ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries