HEALTH TIPS

ಕಾಸರಗೋಡು ಸಿಪಿಸಿಆರ್‍ಐ-ಐಸಿಎಆರ್‍ನಲ್ಲಿ ಸಸ್ಯ ಶರೀರಶಾಸ್ತ್ರದ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಕಾಸರಗೋಡು: ಸಸ್ಯ ಶರೀರಶಾಸ್ತ್ರದ ರಾಷ್ಟ್ರೀಯ ಸಮ್ಮೇಳನ 2024 (ಎನ್‍ಸಿಪಿಪಿ-2024)ಕಾಸರಗೋಡು ಸಿಪಿಸಿಆರ್‍ಐ-ಐಸಿಎಆರ್‍ನಲ್ಲಿ ಮಂಗಳವರ ಅರಂಭಗೊಂಡಿತು. ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಕಾಸರಗೋಡು ಮತ್ತು ಇಂಡಿಯನ್ ಸೊಸೈಟಿ ಫಾರ್ ಪ್ಲಾಂಟ್ ಫಿಸಿಯಾಲಜಿ ಜಂಟಿ ಸಹಯೋಗದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ.   'ಸೆಲ್ ಇನ್ ಫ್ರಾಂಟಿಯರ್ಸ್ ಟು ಹೋಲ್ ಪ್ಲಾಂಟ್ ಫಿಸಿಯಾಲಜಿ: ಬ್ರಿಡ್ಜಿಂಗ್ ಸೈನ್ಸ್ ಅಂಡ್ ಸಸ್ಟೈನಬಿಲಿಟಿ' ಎಂಬ ವಿಚಾರ ಕೇಂದ್ರೀಕರಿಆಯೋಜಿಸಲಾದ ಸಮ್ಮೇಳನವನ್ನು ಅಮೆರಿಕಾದ ಖಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಡಾ. ಪಿ.ವಿ ವರಪ್ರಸಾದ್ ಉದ್ಘಾಟಿಸಿ ಮಾತನಾಡಿ,  ಜಾಗತಿಕ ತಾಪಮಾನ ಕೃಷಿ ವಲಯಕ್ಕೆ ಹೆಚ್ಚಿನ ಆಪತ್ತು ತಂದೊಡ್ಡುತ್ತಿದ್ದು, ಇದರಿಂದ ಪಾರಾಗಲು ಭೌಗೋಲಿಕ ಚರ್ಚೆ ಹಾಗೂ ಪರಿಹಾರೋಪಾಯ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ನಂತರ  'ಆಹಾರ, ಪೆÇೀಷಣೆ ಮತ್ತು ಹವಾಮಾನ ಭದ್ರತೆಯ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಸ್ಯ ಶರೀರಶಾಸ್ತ್ರದ ಪಾತ್ರ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅವರು ಕೃಷಿಯಲ್ಲಿನ ಹತ್ತು ಪ್ರಮುಖ ಆವಿಷ್ಕಾರಗಳನ್ನು ಸ್ಲೈಡ್‍ಶೋ ಮೂಲಕ ವಿವರಿಸಿದರು.


ಕಾಸರಗೋಡು ಸಿಪಿಸಿಆರ್‍ಐ ನಿರ್ದೇಶಕ ಕೆ.ಬಿ ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಸೊಸೈಟಿ ಫಾರ್ ಪ್ಲಾಂಟ್ ಫಿಸಿಯೋಲೊಜಿ(ಐಎಸ್‍ಪಿಪಿ)ಅಧ್ಯಕ್ಷ ಆರ್.  ಚಂದ್ರಬಾಬು, ಐಎಸ್‍ಪಿಪಿ-ಐಸಿಎಆರ್ ವಿಜ್ಞಾನಿ ಮದನ್‍ಪಾಲ್ ಸಿಂಗ್, ಶಿಮ್ಲಾದ ಐಸಿಎಆರ್ ಕೇಂದ್ರೀಯ ಪೊಟೇಟೋ ರಿಸರ್ಚ್ ಇನ್‍ಸ್ಟಿಟ್ಯೂಟ್ ನಿರ್ದೇಶಕ ಬ್ರಿಜೇಶ್ ಸಿಂಗ್, ಕೇಂದ್ರೀಯ ಶುಷ್ಕ ತೋಟಗಾರಿಕಾ ಕೇಂದ್ರದ ನಿರ್ದೇಶಕ ಜಗದೀಶ್ ರಾಣೆ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭ ಸ್ಮರಣಸಂಚಿಕೆ ಹಾಗೂ ಕಲ್ಪಾ ನ್ಯೂಸ್ ಲೆಟರ್ ಬಿಡುಗಡೆಗೊಳಿಸಲಾಯಿತು. ವಿವಿಧ ಐಎಸ್‍ಪಿಪಿ ಪ್ರಶಸ್ತಿ ವಿಜೇತ  ಡಾ.ಅಮರ್ಜಿತ್ ಸಿಂಗ್ ಅವರಿಗೆ ಡಾ.ಆರ್.ಡಿ.ಅಸನ ಚಿನ್ನದ ಪದಕ ಪ್ರಶಸ್ತಿ, ಡಾ.ಕೃಷ್ಣಪ್ರಿಯಾ ವಿ., ಎಸ್ಬಿಐ, ಕೊಯಮತ್ತೂರು ಅವರಿಗೆ ಆರ್‍ಎಚ್ ದಸ್ತೂರ್ ಪ್ರಶಸ್ತಿ, ಡಾ.ಎ.ರಾಮಚಂದ್ರ ರೆಡ್ಡಿ ಅವರಿಗೆ ಸಿರೋಹಿ ಉಪನ್ಯಾಸ ಪ್ರಶಸ್ತಿ, ಡಾ.ಕೆ.ಬಿ. ಹೆಬ್ಬಾರ್ ಅವರಿಗೆ ಎಸ್.ಕೆ.ಸಿಂಹ ಉಪನ್ಯಾಸ ಪ್ರಶಸ್ತಿ, ಡಾ. ನಟರಾಜ್ ಕರಬ ಅವರಿಗೆ ಐಎಸ್‍ಪಿಪಿ ಉಪನ್ಯಾಸ ಪ್ರಶಸ್ತಿ ಹಾಗೂ ಡಾ.ಎಂ. ರವೀಂದ್ರನ್ ಉಪನ್ಯಾಸ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿ ಮುರಳಿಗೋಪಾಲ್ ಸ್ವಾಗತಿಸಿದರು. ಕನ್ವೀನರ್ ರಮೇಶ್ ಎಸ್.ವಿ ವಂದಿಸಿದರು.

ಸಮ್ಮೇಳನದಲ್ಲಿ 280ಮಂದಿ ಮಂದಿ ಪ್ರತಿನಿಧಿಗಳು, ಎನ್‍ಆರ್‍ಐ ಸ್ಪೀಕರ್ಸ್, ಯುಎಸ್‍ಎ, ಇಂಗ್ಲೆಂಡ್, ಕೆನಡಾ, ಭಾರತದ ಪ್ರಮುಖ ಸಸ್ಯ ಶರೀರಶಾಸ್ತ್ರದ ತಜ್ಞರು, ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.  ಮೂರು ದಿವಸಗಳ ಕಾಲ ನಡೆಯಲಿರುವ ಸಮ್ಮೇಳನ ಡಿ. 19ರಂದು ಸಂಪನ್ನಗೊಳ್ಳಲಿದೆ. ಸಮ್ಮೇಳನದ ಅಂಗವಾಗಿ ವಿವಿಧ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಆಯೋಜಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries