ಉಪ್ಪಳ: ಬಾಯಾರು ಮುಳಿಗದ್ದೆಯ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ನೂತನ ಗಣೇಶ ಮಂದಿರದ ನಿರ್ಮಾಣ ನಿಧಿ ಸಂಚಯನ ಕಾರ್ಯಕ್ರಮ ಇಂದು ಮುಳಿಗದ್ದೆ ಶ್ರೀಗಣೇಶ ಗಿರಿಯಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದೆ.
ಶ್ರೀಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀಚಾಮುಂಡೇಶ್ವರಿ ಕ್ಷೇತ್ರದ ಶ್ರೀಮಹಾಬಲೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಸಮಾರಂಭದಲ್ಲಿ ನೇಪಾಳದ ಪಶುಪತಿ ದೇವಸ್ಥಾನದ ನಿವೃತ್ತ ಅರ್ಚಕ ರಾಮ ಕಾರಂತ ಪದ್ಯಾಣ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಮಾನವಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶಾಮ ಭಟ್, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮುಖ್ಯ ಅತಿಥಿಗಳಾಗಿರುವರು. ಮಂಗಳೂರು ಸಂಸದ ಕ್ಯಾಪ್ಟನ್.ಬ್ರಿಜೇಶ್ ಚೌಟ, ಹಿರಿಯ ವೈದ್ಯ ಡಾ.ಬಿ.ಎಸ್.ರಾವ್.ಕಾಸರಗೋಡು, ಉದ್ಯಮಿ ವಸಂತ ಪೈ ಬದಿಯಡ್ಕ, ಉದ್ಯಮಿ ಮನೋಜ್ ಸರಿಪಳ್ಳ, ಉದ್ಯಮಿ ಸೌಂದರ್ಯ ರಮೇಶ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಗ್ರಾಮಾಭಿವೃದ್ದಿ ಯೋಜಾಧಿಕಾರಿ ಶಶಿಕಲಾ ಸುವರ್ಣ, ಆರೋಗ್ಯ ನಿರೀಕ್ಷಕಿ ಕುಸುಮ ಬದಿಯಾರು, ವಕೀಲ ರತ್ನಾಕರ ಶೆಟ್ಟಿ, ಮಂಜುನಾಥ ಶೆಟ್ಟಿ ಬಾಕ್ರಬೈಲು, ವಕೀಲ ರಾಮಕೃಷ್ಣ ಭಟ್ ಪೆರ್ವಡಿ,ವಸಂತ ಪಂಡಿತ್ ಗುಂಪೆ, ಬಾಲಕೃಷ್ಣ ಶೆಟ್ಟಿ, ರಮೇಶ್ ಆಳ್ವ ಪಿಲಿಯಂದೂರು, ಕೆ.ರವಿಶಂಕರ ಶೆಟ್ಟಿ ಉಳಿದೊಟ್ಟು, ಕೆ.ರವೀಂದ್ರ ಶೆಟ್ಟಿ, ಶ್ಯಾಮ ಸೂರ್ಯ, ಗಣೇಶ್ ಭಟ್ ಬಾಯಾರು ಬೆಂಗಳೂರು, ಸದಾನಂದ ಆಳ್ವ ಪೆರ್ವಡಿ, ಅಶ್ವತ್ ಪೂಜಾರಿ ಲಾಲ್ ಬಾಗ್, ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಉದಯ ಚೆಟ್ಟಿಯಾರ್, ಶಂಕರನಾರಾಯಣ ಭಟ್ ತಾಳ್ತಜೆ, ಪ್ರಶಾಂತ್ ಭಟ್ ಪಟ್ಟಾಜೆ, ವೀರಪ್ಪ ಅಂಬಾರು, ವೆಂಕಟರಮಣ ಮೂಡಿತ್ತಾಯ ಬಾಯಿಕಟ್ಟೆ, ಐತ್ತಪ್ಪ ಶೆಟ್ಟಿ, ಸುಧಾಕರ ಕೊಡ್ಲಮುಗೇರು, ರಾಮ ಅಂಗಡಿಮಾರು, ಕುಮಾರಸುಬ್ರಹ್ಮಣ್ಯ ಭಟ್ ಕೊಂದಲಕಾಡು, ಈಶ್ವರ ಭಟ್ ಮಾಣಿಪ್ಪಾಡಿ ಉಪಸ್ಥಿತರಿರುವರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ 11 ರಿಂದ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ, ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.