ನವದೆಹಲಿ: ಪತ್ನಿಯ ಜೊತೆ ಅಸಹಜ ಅಪರಾಧ ಎಸಗಿದ ಹಾಗೂ ಆಕೆಯ ಸಹಮತ ಇಲ್ಲದೆಯೇ ಗರ್ಭಪಾತಕ್ಕೆ ಕಾರಣನಾದ ಆರೋಪ ಎದುರಿಸುತ್ತಿರುವ ಪತಿಯ ಜಾಮೀನು ಅರ್ಜಿಯನ್ನು ಇಲ್ಲಿನ ನ್ಯಾಯಾಲಯವೊಂದು ವಜಾಗೊಳಿಸಿದೆ. ಪತಿಯ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಕೋರ್ಟ್ ಹೇಳಿದೆ.
ಪತಿಯ ವಿರುದ್ಧ ಅಸಹಜ ಅಪರಾಧ, ಮಹಿಳೆಯ ಸಮ್ಮತಿ ಇಲ್ಲದೆ ಗರ್ಭಪಾತ ಉಂಟುಮಾಡುವುದು ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಪತಿಯು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶ ಸುನಿಲ್ ಕುಮಾರ್ ನಡೆಸಿದ್ದರು.
'ದೂರುದಾರೆಯ ಹೇಳಿಕೆಗಳನ್ನು ಗಮನಿಸಿದರೆ, ಆರೋಪಗಳು ಬಹಳ ಸತ್ಯ ಎಂದು ಅನ್ನಿಸುತ್ತವೆ. ಹೀಗಾಗಿ ಈ ಜಾಮೀನು ಅರ್ಜಿಯನ್ನು ಮಾನ್ಯ ಮಾಡಲು ಆಧಾರಗಳು ಇಲ್ಲ' ಎಂದು ಅವರು ಡಿಸೆಂಬರ್ 26ರಂದು ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.
ಆರೋಪಿಯು ಸಂತ್ರಸ್ತೆಯ ಮುಖದ ಮೇಲೆ ಬಿಯರ್ ಬಾಟಲಿ ಎಸೆದು, ಆಕೆಯ ದೇಹದ ಮೇಲೆ ಸಿಗರೇಟಿನ ತುಂಡಿನಿಂದ ಸುಟ್ಟು ಗಾಯ ಮಾಡಿದ್ದ ಎಂದು ದೂರುದಾರೆ ಪರ ವಕೀಲರು ನ್ಯಾಯಾಧೀಶರಿಗೆ ಹೇಳಿದ್ದರು.