ಕಾಸರಗೋಡು: ಕೃಷಿ ಮತ್ತು ಗ್ರಾಮೀಣ ವಲಯದಲ್ಲಿನ ಅಭಿವೃದ್ಧಿ ಬಗ್ಗೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಅಗ್ರಿಟೆಕ್ ಹ್ಯಾಕಥಾನ್ ಆಯೋಜಿಸಲಾಯಿತು.
ಕಂಪ್ಯೂಟರ್ ಸೈನ್ಸ್, ನಾವೀನ್ಯತೆ, ಉದ್ಯಮಶೀಲತೆ ಮತ್ತು ಅಭಿವೃದ್ಧಿ ವಿಭಾಗ ವತಿಯಿಂದ 30ತಾಸುಗಳ ಹ್ಯಾಕಥಾನ್ ಆಯೋಜಿಸಲಾಗಿತ್ತು. ಉತ್ತಮ ಕಲ್ಪನೆಗಾಗಿ ಆಶಿನ್ ಪಿ ಕೃಷ್ಣ ಮತ್ತು ಗೋಕುಲ್ ಕೃಷ್ಣ ತಂಡ ಸದಸ್ಯರಾಗಿರುವ ಕೋಯಿಕ್ಕೋಡ್ ಮೂಲದ ಸ್ಟಾರ್ಟಪ್ ಕಂಪನಿ ಕೊಕೊ ಬಾಟ್ ಪ್ರಥಮ 50,000 ರೂನಗದು ಬಹುಮಾನ ಪಡೆದುಕೊಂಡಿತು. 'ವೀ ಈಟ್ ಬ್ಲಾಕ್ಸ್' (ಕೊಡಕರ ಸಹೃದಯ ಇಂಜಿನಿಯರಿಂಗ್ ಕಾಲೇಜು), ಟೀಮ್ ರಿಸ್ (ಮೂತ್ತೂಟ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್), ಕೋಟೆಕ್ಸ್‍ಪೆÇ್ಲೀರಾ (ಎಲ್‍ಬಿಎಸ್‍ಇಂಜಿನಿಯರಿಂಗ್ ಕಾಲೇಜು) ರನ್ನರ್ಸ್‍ಅಪ್ ಆಗಿ ವಿಜೇತರಾಗಿದ್ದು, ತಲಾ 10000 ರೂ. ನಗದು ಬಹುಮಾನ ಪಡೆದುಕೊಂಡರು.
ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯ, ಕೇರಳ ಸ್ಟಾರ್ಟಪ್ ಮಿಷನ್ ಮತ್ತು ಸಿಪಿಸಿಆರ್‍ಐ ಜಂಟಿಯಾಗಿ ಹ್ಯಾಕಥಾನ್ ಆಯೋಜಿಸಿರ್ಥಥೂ. ವಿವಿಧ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಭಾರ ಉಪಕುಲಪತಿ ಪೆÇ್ರ. ಜೋಸೆಫ್ ಕೋಯಿಪಲ್ಲಿ ಉದ್ಘಾಟಿಸಿದರು. ಕೆ.ಎಸ್. ಶರೋನ್ವಾಸ್, ಡಾ. ರವಿ ಭಟ್, ಪೆÇ್ರ. ಜೆ.ಎಸ್. ಜಯಸುಧಾ, ಸಿ. ಹಾಶೀರ್ ಉಪಸ್ಥಿತರಿದ್ದರು. ಪೆÇ್ರ. ಆರ್. ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಡಾ. ಟಿ.ಎಂ. ತಸ್ಲೀಮಾ ಸ್ವಾಗತಿಸಿದರು. ಡಾ. ವಿ. ಆದಿತ್ಯ ವಂದಿಸಿದರು.