ತಿರುವನಂತಪುರಂ; ಸಿನಿಮಾ ಮತ್ತು ಧಾರಾವಾಹಿ ನಟ ದಿಲೀಪ್ ಶಂಕರ್ ಹೋಟೆಲ್ ರೂಮಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಿರುವನಂತಪುರಂನ ಖಾಸಗಿ ಹೋಟೆಲ್‍ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಎರಡು ದಿನಗಳ ಹಿಂದೆ ದಿಲೀಪ್ ಶಂಕರ್ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದರು.
ಆದರೆ ಅವರು ಕೊಠಡಿಯಿಂದ ಹೊರಬಂದಿರಲಿಲ್ಲ ಎಂದು ವರದಿಯಾಗಿದೆ. ಇಂದು ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದರಿಂದ ಹೋಟೆಲ್ ಸಿಬ್ಬಂದಿ ಕೊಠಡಿ ತೆರೆದಾಗ ನಟ ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಅಮ್ಮ ಸದಾ, ಸುಂದರಿ ಮತ್ತು ಪಂಚಾಗ್ನಿ ಮುಂತಾದ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಯಲ್ಲಿ ನಟಿಸಲು ಹೋಟೆಲ್‍ನಲ್ಲಿ ಕೊಠಡಿ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಗೊತ್ತಾಗಲಿದೆ.