ಕುಂಬಳೆ: ಸೈಂಟ್ ಮೋನಿಕಾ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‍ಇ) ಕುಂಬಳೆ ಇದರ ಶಾಲಾ ವಾರ್ಷಿಕೋತ್ಸವವು ಶಾಲಾ ಆವರಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ಮಂಜೇಶ್ವರ ಶಾಸಕÀ ಎ.ಕೆ.ಎಂ.ಅಶ್ರಫ್ ಅವರನ್ನು ಶಾಲಾ ವತಿಯಿಂದ ಸಮ್ಮಾನಿಸಲಾಯಿತು. ಶಾಸಕರು ಶಾಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಇನ್ನೂ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗಲಿ ಎಂದು ಶುಭ ಹಾರೈಸಿದರು.
ಗೌರವ ಅತಿಥಿಗಳಾಗಿ ಅಲ್ಲಿಪಾದೇ ಸೈಂಟ್ ಆಂತಣಿ ಚರ್ಚ್‍ನ ಧರ್ಮಗುರುಗಳಾದ ಫಾದರ್ ರಾಬರ್ಟ್ ಡಿ'ಸೋಜ ಪಾಲ್ಗೊಂಡಿದ್ದರು. ಅವರು ಸೈಂಟ್ ಮೋನಿಕಾ ಶಾಲೆಯ ಏಳಿಗೆಯನ್ನು ಕಂಡು ಅಭಿನಂದಿಸಿದರು ಹಾಗೂ ಶಾಲಾ ವಾತಾವರಣವು ಮಕ್ಕಳ ಅಭಿವೃದ್ಧಿಗೆ ಪೂರಕವಾಗಿ ಇದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯ ವ್ಯವಸ್ಥಾಪಕರಾದ ಫಾದರ್ ಮೆಲ್ವಿನ್ ಡಿ'ಸೋಜಾ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಉಪ ಪ್ರಾಂಶುಪಾಲ ಫಾದರ್ ಸೂರಜ್ ಲೋಬೊ ಸ್ವಾಗತಿಸಿ, ಪ್ರಾಂಶುಪಾಲೆ ಸಿಸ್ಟರ್ ಅನ್ಸಿ ಮ್ಯಾಥ್ಯೂ ಶಾಲಾ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿ ಚರ್ಚ್‍ನ ಪಾಲನಾ ಸಮಿತಿಯ ಉಪಾಧ್ಯಕ್ಷ ರಾಜು ಸ್ಟೀಫನ್ ಡಿ'ಸೋಜಾ, ಉಪಾಧ್ಯಕ್ಷೆ ಲಿಡಿಯ ಡಿ'ಸೋಜ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ರೈ, ಪಂಚಾಯತಿ ಸದಸ್ಯ ಯೂಸುಫ್, ಶಾಲಾ ವಿದ್ಯಾರ್ಥಿ ನಾಯಕ ಶಾಶ್ವತ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಶಿಕ್ಷಕಿ ರಶಿತಾ ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕಿ ದೀಕ್ಷಿತ ವಂದಿಸಿದರು.