ಕಾಸರಗೋಡು: ನಗರದ ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿಸಂಬರ್ 16 ರಿಂದ 19 ರ ತನಕ ಕೋಟಿ ಪಂಚಾಕ್ಷರಿ ಜಪಯಜ್ಞ ಜರಗಲಿದೆ. ಜಪಯಜ್ಞದ ಅಂಗವಾಗಿ ಯಜ್ಞಕುಂಡ ಹಾಗೂ ಚಪ್ಪರ ನಿರ್ಮಾಣ ಮುಹೂರ್ತ ಕಾರ್ಯಕ್ರಮ ದೇವಸ್ಥಾನ ವಠಾರದಲ್ಲಿ ನಡೆಯಿತು.
ಕ್ಷೇತ್ರದ ಟ್ರಸ್ಟ್ ಬೊರ್ಡ್ ಅಧ್ಯಕ್ಷ ವಕೀಲ ಗೋವಿಂದನ್ ನಾಯರ್, ಕೋಟಿಪಂಚಾಕ್ಷರಿ ಜಪ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ, ಹೋಟೆಲ್ ಉದ್ಯಮಿ ರಾಮ್ ಪ್ರಸಾದ್, ಉಪಾಧ್ಯಕ್ಷ ಅರ್ಜುನ್ ತಾಯಲಂಗಾಡಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಕ್ಷೇತ್ರ ನಿರ್ವಹಣಾಧಿಕಾರಿ ಟಿ.ರಾಜೇಶ್, ಟ್ರಸ್ಟ್ ಸದಸ್ಯೆ ಉಷಾ, ಯಜ್ಞ ಸಮಿತಿ ಪದಾಧಿಕಾರಿಗಳಾದ ಮೀರಾ ಕಾಮತ್, ಪ್ರಚಾರ ಸಮಿತಿ ಸಂಚಾಲಕ ಕಿಶೋರ್ ಕುಮಾರ್, ಸದಸ್ಯರಾದ ವಸಂತ್ ಕೆರೆಮನೆ, ಶ್ರೀಕಾಂತ್ ಕಾಸರಗೋಡು, ಅಯ್ಯಪ್ಪ ವ್ರತಾಧಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು. ಜಪಯಜ್ಞದ ಅಂಗವಾಘಿ ಕ್ಷೇತ್ರದಲ್ಲಿ ಕಲ್ಯಾಣ ಮಂಟಪ ಹಾಗೂ ಪಾಕಶಾಲೆಯ ನವೀಕರಣ ಕಾಮಗಾರಿಯು ಭರದಿಂದ ಸಾಗುತ್ತಿದೆ.