ಸಮರಸ ಚಿತ್ರಸುದ್ದಿ: ಬದಿಯಡ್ಕ: ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಲ್ಲಿ ವೆಳುತ್ತೇಡನ್ ಕುರುಪ್ ಸಮುದಾಯದವರ ಸ್ಥಾನಿಕ ಕಾರ್ಮಿಕತ್ವದಲ್ಲಿ ಶ್ರೀ ಕ್ಷೇತ್ರದ ದೈವಗಳ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 10.12ರ ಕುಂಭಲಗ್ನ ಸುಮುಹೂರ್ತದಲ್ಲಿ ಜರಗಿತು. ಶ್ರೀ ಐವರು, ಶ್ರೀ ವಿಷ್ಣುಮೂರ್ತಿ, ಶ್ರೀ ಪಡಿಂಞõÁರ್ ಚಾಮುಂಡಿ, ಶ್ರೀ ನಾಗಬ್ರಹ್ಮ, ಶ್ರೀ ರಕೇಶ್ವರಿ, ಶ್ರೀ ಗುಳಿಗ ಮತ್ತು ಶ್ರೀ ಚೌಕಾರು ಗುಳಿಗೆ ದೈವಗಳ ಪ್ರತಿಷ್ಠಾ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಹಾಗೂ ವಿಜೃಂಭಣೆಯಿಂದ ನಡೆಯಿತು.