ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯವನ್ನು ತಾವು ತಂದೆವು ಎಂದು ಹೇಳುವ ಕೆಲವರ ಏಕಸ್ವಾಮ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಭಾರತದ ಇತಿಹಾಸವನ್ನು ತಿರುಚಲಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಭಾನುವಾರ ಆರೋಪಿಸಿದರು.
ರಾಜಾ ಮಹೇಂದ್ರ ಪ್ರತಾಪ್ ಅವರ 138ನೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಧನಕರ್ ಅವರು, ದೇಶದ ಸ್ವಾತಂತ್ರ್ಯದ ಅಡಿಪಾಯದ ಬಗ್ಗೆ ಜನರಿಗೆ ಬಹಳ ಭಿನ್ನವಾಗಿ ಹೇಳಿಕೊಡಲಾಗುತ್ತಿದೆ ಎಂದು ಹೇಳಿದರು.
'ಇತಿಹಾಸ ಪುಸ್ತಕಗಳು ನಮ್ಮ ಹೀರೊಗಳಿಗೆ ಅನ್ಯಾಯ ಎಸಗಿವೆ. ನಮ್ಮ ಇತಿಹಾಸವನ್ನು ತಿರುಚಲಾಗಿದೆ. ಇದು ನಮ್ಮ ಆತ್ಮಸಾಕ್ಷಿಯ ಮೇಲಿನ ಅಸಹನೀಯ ನೋವು. ನಮ್ಮ ಹೃದಯ ಮತ್ತು ಆತ್ಮ ಈ ಹೊರೆಯನ್ನು ಹೊತ್ತುಕೊಂಡಿವೆ. ನಾವು ಬಹಳ ದೊಡ್ಡ ಬದಲಾವಣೆಯನ್ನು ತರಬೇಕಿದೆ' ಎಂದರು.
ಪ್ರತಾಪ್ ಅವರಿಗೆ ಸಿಗಬೇಕಿದ್ದ ಸ್ಥಾನವನ್ನು ಇತಿಹಾಸವು ಅವರಿಗೆ ನೀಡಿಲ್ಲ ಎಂದರು.