ದೋಹಾ : ರಷ್ಯಾ- ಉಕ್ರೇನ್ ನಡುವಿನ ಯುದ್ಧ ನಿಲ್ಲುವ ಸೂಚನೆಯೊಂದಿಗೆ, ಪರಿಸ್ಥಿತಿಯು ಸಹಜ ಸ್ಥಿತಿಗೆ ತಲುಪುತ್ತಿದ್ದು, ಅದಕ್ಕಾಗಿ ಹೆಚ್ಚು ನಾವೀನ್ಯತೆ ಮತ್ತು ಸಕ್ರಿಯ ರಾಜತಾಂತ್ರಿಕ ಸಹಭಾಗಿತ್ವಕ್ಕೆ ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಕರೆ ನೀಡಿದ್ದಾರೆ.
ಗಲ್ಫ್ ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿನ ಸಂಘರ್ಷವು ಭಾರತ ಸೇರಿದಂತೆ ಎಲ್ಲ ದೇಶಗಳಲ್ಲಿ ತೈಲ, ರಸಗೊಬ್ಬರಗಳು ಮತ್ತು ಸಾಗಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಕತಾರ್ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರ ಸಚಿವ ಮೊಹಮ್ಮದ್ ಬಿನ್ ಅಬ್ದುಲ್‌ರಹಮನ್ ಅವರ ಆಹ್ವಾನದ ಮೇರೆಗೆ ದೋಹಾ ಫೋರಾಂಗೆ ಭಾಗವಹಿಸಲು ದೋಹಾಗೆ ಭೇಟಿ ನೀಡಿದ ಜೈಶಂಕರ್, ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬಾರ್ತ್ ಈಡೆ ಅವರೊಂದಿಗೆ ದೋಹಾ ಫೋರಾಂನ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಗಲ್ಫ್ ಮತ್ತು ಸಿರಿಯಾದಲ್ಲಿನ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘರ್ಷದ ವಿಸ್ತರಣೆ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಇಸ್ರೇಲ್ ಮತ್ತು ಇರಾನ್ ನಡುವಿನ ಪರಸ್ಪರ ಗುಂಡಿನ ದಾಳಿಯ ಉದಾಹರಣೆ ನೀಡಿದರು. ಕೆಂಪು ಸಮುದ್ರದಲ್ಲಿನ ಪರಿಸ್ಥಿತಿಯು ಏಷ್ಯಾದ ಹಡಗು ಸಾಗಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.