ಬದಿಯಡ್ಕ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬದಿಯಡ್ಕ ಇದರ ಆಶ್ರಯದಲ್ಲಿ ಬದಿಯಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಗೀತಾ ಜಯಂತಿ ಕಾರ್ಯಕ್ರಮ ನಡೆಯಿತು. ಗೀತಾವಾಚನ, ಗೀತೋಪದೇಶದ ಸಂದೇಶವನ್ನು ಸದಸ್ಯರಿಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತ ಧಾರ್ಮಿಕ ಮುಂದಾಳು ಬಿ.ವಸಂತ ಪೈ ಅವರಿಗೆ ಅಭಿನಂದನೆ ಸಮರ್ಪಿಸಲಾಯಿತು. 16 ಮಂದಿ ಸದಸ್ಯರು ಗೀತಾವಾಚನದಲ್ಲಿ ಪಾಲ್ಗೊಂಡಿದ್ದರು. ಸಮಾಜದ ಅಧ್ಯಕ್ಷ ಗೋಕುಲದಾಸ ಪೈ, ಕಾರ್ಯದರ್ಶಿ ಜ್ಞಾನದೇವ ಶೆಣೈ, ಕೋಶಾಧಿಕಾರಿ ರಾಘವೇಂದ್ರ ಪ್ರಸಾದ್, ಸದಸ್ಯರು ಪಾಲ್ಗೊಂಡಿದ್ದರು.