ದರಾಬಾದ್: ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ಒಂದು ಕೋಟಿ ಸದಸ್ಯರನ್ನು ವಿವಿಧ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರನ್ನು 'ಕೋಟ್ಯಧಿಪತಿ" ಗಳನ್ನಾಗಿ ಮಾಡುವ ಯೋಜನೆಗಳ ಮೂಲಕ ತಮ್ಮ ಸರ್ಕಾರ ಮುಂದುವರಿಯುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಹೇಳಿದ್ದಾರೆ.
ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರ ಜೊತೆ ಮಹಿಳಾ ಸ್ವಸಹಾಯ ಸಂಘಗಳ 'ಇಂದಿರಾ ಮಹಿಳಾ ಶಕ್ತಿ ಬಜಾರ್' ಉದ್ಘಾಟಿಸಿದ ನಂತರ ಮಾತನಾಡಿದ ರೆಡ್ಡಿ, ತಮ್ಮ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ₹500ಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸುವುದು, ಬಡವರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸರಬರಾಜು, ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಇಂದಿರಾ ಮಹಿಳಾ ಶಕ್ತಿ ಕ್ಯಾಂಟೀನ್‌ಗಳು ಮೂಲಕ ಅಭಿವೃದ್ಧಿ ಪಥದಲ್ಲಿ ಅಡಿ ಇಟ್ಟಿದೆ ಎಂದಿದ್ದಾರೆ.
ಸರ್ಕಾರವು ಸ್ವಸಹಾಯ ಗುಂಪುಗಳಿಗೆ ಸೌರ ವಿದ್ಯುತ್ ಸ್ಥಾವರಗಳನ್ನು ಸಹ ಮಂಜೂರು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಸ್ವಸಹಾಯ ಸಂಘಗಳಲ್ಲಿ ಪ್ರಸ್ತುತ ಒಟ್ಟು ಸದಸ್ಯರ ಸಂಖ್ಯೆ 65 ಲಕ್ಷವಾಗಿದ್ದು, ಅದು ಒಂದು ಕೋಟಿ ಆಗಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅದನ್ನು ಒಂದು ಕೋಟಿ ಮಾಡುವ ಜವಾಬ್ದಾರಿ ನಿಮ್ಮದು, ಒಂದು ಕೋಟಿ (ಮಹಿಳೆಯರನ್ನು) ಕೋಟ್ಯಧಿಪತಿಗಳನ್ನಾಗಿ ಮಾಡುವ ಜವಾಬ್ದಾರಿ ನನ್ನದು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮುಂದಿನ ವರ್ಷ, 10 ಅವಿಭಜಿತ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಮಹಿಳೆಯರ ಜೊತೆ ಸಭೆಗಳನ್ನು ನಡೆಸುತ್ತೇನೆ ಎಂದು ರೆಡ್ಡಿ ಹೇಳಿದ್ದಾರೆ.