ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮ ಪ್ರತಿಷ್ಠಾನದ ಸಭಾಂಗಣದಲ್ಲಿ ಜರುಗಿತು. ಕಲೆ ಸಾಹಿತ್ಯ ಬೆಳೆಸುವ, ಉಳಿಸುವ ಹಾಗೂ ಮುಂದಿನ ಪೀಳಿಗೆ ಹಸ್ತಾಂತರಿಸುವ ದೃಢಸಂಕಲ್ಪದ ಯೋಜನೆ ಹಮ್ಮಿಕೊಳ್ಳಲಾಗಿತ್ತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, ಕಲೆಯ ಬೆಳವಣಿಗೆಗೆ ಪೂರಕ ವಾತಾವರಣ ಒದಗಿಸಿಕೊಡುತ್ತಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಧನೆ ಮಹತ್ತರವಾದುದು. ಒಂದು ಅಕಾಡೆಮಿ ಅಥವಾ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಪ್ರತಿಷ್ಠಾನ ಮಾಡುತ್ತಿರುವುದು ಶ್ಲಾಘನೀಯ. ಪ್ರತಿಷ್ಠಾನದಲ್ಲಿ ಮಕ್ಕಳಿಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಹಮ್ಮಿಕೊಳ್ಳುತ್ತಿರುವುದು ಕಲೆಯ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗುವುದಾಗಿ ತಿಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಚಿಕ್ಕ ಕಬ್ಬಾರ ಹಾವೇರಿ ಜಿಲ್ಲೆ ಇದರ ಗೌರವಾಧ್ಯಕ್ಷ ಶೇಖರ ಗೌಡ ಪಾಟೀಲ ಅದ್ಯಕ್ಷತೆ ವಹಿಸಿದ್ದರು. ಬಹುಭಾಷಾ ವಿದ್ವಾಂಸ ಮಂಡ್ಯದ ಕೊಕ್ಕಡ ವೆಂಕಟ್ರಮಣ ಭಟ್, ಡಾ. ಪ್ರಭು ಸ್ವಾಮಿ ಹಾಳೇವಾಡಿ ಮಠ, ಡಾ. ಎಸ್ ಹನುಮಂತಪ್ಪ ಹಾವೇರಿ, ಶ್ರೀಧರ ಶೆಟ್ಟಿ ಮುಟ್ಟಂ, ಗೋಪಾಲ ಶೆಟ್ಟಿ ಅರಿಬೈಲು, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೋಪಿಕಾ ಸತೀಶ ಮಯ್ಯ, ನರಸಿಂಹಮೂರ್ತಿ, ಡಾ. ಗಂಗಯ್ಯ ಕುಲಕರ್ಣಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಹುಭಾಷಾ ವಿದ್ವಾಂಸ, ಪ್ರತಿಷ್ಠಾನ ಪ್ರಕಾಶಿಸಿದ ಸರಿಗನ್ನಡ ಪುಸ್ತಕದ ಸಂಪಾದಕ ಕೊಕ್ಕಡ ವೆಂಕಟರಮಣ ಭಟ್ ಇವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ, ಮಧುರ ಉಪಾಧ್ಯ ಬೆಂಗಳೂರು ಇವರಿಗೆ ಸಿರಿಬಾಗಿಲು ಪ್ರತಿಷ್ಠಾನದ ಮಹಾಪೆÇೀಷಕರು ಗೌರವ ನೀಡಲಾಯಿತು. ಹೊರ ರಾಜ್ಯದ ಕನ್ನಡಿಗರಾಗಿ,ಗುಜರಾತ್ ವಾಪಿಯಲ್ಲಿರುವ ಶಂಕರನಾರಾಯಣ ಕಾರಂತ ಪಣಂಬೂರು ಇವರನ್ನು ಗೌರವಿಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ನಾಟ್ಯ ತರಗತಿಯ ಶಿಕ್ಷಕ ಲಕ್ಷ್ಮಣ ಕುಮಾರ್ ಮರಕಡ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ದಂಪತಿಯನ್ನು ನಾಟ್ಯ ತರಗತಿಗಳ ವಿದ್ಯಾರ್ಥಿಗಳ ಪೆÇೀಷಕರು, ವಿದ್ಯಾರ್ಥಿಗಳು ಸೇರಿ ಗೌರವಿಸಿದರು.
ಕಾರ್ಯಖ್ರಮದ ಅಂಗವಾಗಿ ಊರಿನ ತಂಡಗಳ ಭಜನಾ ಕಾರ್ಯಕ್ರಮ, ಪ್ರತಿಷ್ಠಾನದ ಮುಂದಿನ ಪೀಳಿಗೆಗೆ ಹಸ್ತಾಂತರ ಯೋಜನೆಯಡಿ ಮಕ್ಕಳ ತಂಡದ ತಾಳಮದ್ದಲೆ ಕಾರ್ಯಕ್ರಮ, ಪ್ರತಿಷ್ಠಾನದಲ್ಲಿ ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳ ರಂಗ ಪ್ರವೇಶ, ಪ್ರತಿಷ್ಠಾನದ ತಂಡದಿಂದ ಗರುಡ ಗರ್ವಭಂಗ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಪ್ರಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಚಂದ್ರಕಲಾ ನೀರಾಳ ಕಾರ್ಯಾಕ್ರಮ ನಿರೂಪಿಸಿದರು. ವಿದ್ಯಾಶ್ರೀ ನೀರಾಳ ವಂದಿಸಿದರು.