ಕಾಸರಗೋಡು: ನಗರದ ನೆಲ್ಲಿಕುಂಜೆ ಶಣೀಃ ರೈಲ್ವೆ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸಿರಿಬಾಗಿಲು, ಕಜೆ ಕೈಲಾಸ ಕೃಪಾ ನಿವಾಸಿ ಬಾಲಕೃಷ್ಣ ಆಳ್ವ-ಸೋಮಾವತಿ ದಂಪತಿಯ ಪುತ್ರ ತಿಲಕ್ ಆಳ್ವ(39)ಮೃತಪಟ್ಟ ವ್ಯಕ್ತಿ. ಅವಿವಾಹಿತರಾಗಿದ್ದ ತಿಲಕ್ ಆಳ್ವ ಅವರು ರೈಲು ಡಿಕ್ಕಿಯಾಗಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.