ವಿಟ್ಲ: ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿಯ ವಿಟ್ಲ ಸಮಿತಿ ರೂಪಿಕರಣ ಸಭೆ ಮಂಗಳವಾರ ಸಂಜೆ ವಿಟ್ಲ ಶ್ರೀರಾಮ ಮಂದಿರದಲ್ಲಿ ರಾಮದಾಸ ಶೆಣೈ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಧೂರು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಧೂರು ಸಮಿತಿಯ ಪದಾಧಿಕಾರಿಗಳಾದ ರಮೇಶ್ ಪಿ, ಸಂತೋಷ್ ಕುಮಾರ್ ಮಧೂರು,ಗೋಪಾಲಕೃಷ್ಣ ಭಟ್ ಹಾಗೂ ಈಶ್ವರ ಭಟ್ ವಿಟ್ಲ, ಕರುಣಾಕರ ನಾಯಿತೊಟ್ಟು, ರಾಮಕೃಷ್ಣ ಪುಣಚ, ಮನೋರಾಜ್ ಪೆರುವಾಯಿ, ಗಣೇಶ್ ಭಟ್ ಮಾಣಿಲ, ಜಯರಾಮ್ ಕೊಳನಾಡು, ಅಶೋಕ್ ಮಾಣಿಲ, ವೀರಪ್ಪ ಮಾಮೇಶ್ವರ, ರಾಧಾಕೃಷ್ಣ ನಾಯಕ್, ಸತೀಶ್ ಕುಮಾರ್ ಆಳ್ವ, ಕಾನ ಈಶ್ವರ ಭಟ್ ಮೊದಲಾದವರು ಉಪಸ್ಥಿತರಿದ್ದು ಸಮಾಲೋಚನೆಯಲ್ಲಿ ಸಲಹೆ ಸೂಚನೆ ನೀಡಿದರು. ಪ್ರಭಾಕರ ವಿಟ್ಲ ವಂದಿಸಿದರು. ಜಗನ್ನಾಥ ಮೈತ್ರಿಯ ಗುರುಕುಲ ಕಾರ್ಯಕ್ರಮ ನಿರೂಪಿಸಿದರು.