ತಿರುವನಂತಪುರ: ಕೇರಳದ ವಿವಾದಿತ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಸಿಎಂ ಪಿಣರಾಯಿ ವಿಜಯನ್ ಅವರ ಆಪ್ತ ಎಂ.ಆರ್. ಅಜಿತ್ ಕುಮಾರ್ ಅವರನ್ನು ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶ್ರೇಣಿಗೆ ಪರಿಗಣಿಸಲಾಗಿದೆ.
ಎಂ.ಆರ್. ಅಜಿತ್ ಕುಮಾರ್ 1995ರ ಐಪಿಎಸ್ ಬ್ಯಾಚ್‌ನ ಕೇರಳ ಕೇಡರ್‌ನ ಅಧಿಕಾರಿಯಾಗಿದ್ದಾರೆ.
ಅಜಿತ್ ಕುಮಾರ್ ಅವರು ಕೇರಳದ ಮುಂದಿನ ಡಿಜಿಪಿ ಆಗಿ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದ್ದು ಸಿಎಂ ನಿರ್ಧಾರ ರಾಜ್ಯದಲ್ಲಿ ಹೊಸ ವಿವಾದವನ್ನು ಎಬ್ಬಿಸಬಹುದು ಎಂದು ಪಿಟಿಐ ವರದಿ ಮಾಡಿದೆ.
ಅಜಿತ್ ಕುಮಾರ್ ಅವರು ಕಳೆದ ವರ್ಷ ಆರ್‌ಎಸ್‌ಎಸ್‌ನ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದರು, ತ್ರಿಶೂರ್‌ಪೂರ್ಂ ಹಿಂದೂ ಹಬ್ಬದ ವಿವಾದದಲ್ಲಿ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದು ಮತ್ತು ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಸುರೇಶ್ ಗೋಪಿ ಅವರು ಬಿಜೆಪಿಯಿಂದ ಗೆಲ್ಲಲು ಅಜಿತ್ ಕುಮಾರ್ ಅವರ ಪಾತ್ರ ಇದೆ ಎಂಬುದು ಅವರ ವಿರೋಧಿಗಳ ಆರೋಪವಾಗಿದೆ.
ಆಡಳಿತಾರೂಢ ಎಲ್‌ಡಿಎಫ್ ನ ಕೆಲವರು ಹಾಗೂ ಕಾಂಗ್ರೆಸ್ ಸೇರಿದಂತೆ ಸಿಪಿಐ ಅನೇಕ ಪಕ್ಷಗಳು ಎಂ.ಆರ್. ಅಜಿತ್ ಕುಮಾರ್ ಅವರನ್ನು ವಿರೋಧಿಸಿದ್ದವು. ಇದರಿಂದ ಅವರನ್ನು ಅಕ್ಟೋಬರ್‌ನಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿಯಿಂದ ಮೀಸಲು ಪೊಲೀಸ್ ಪಡೆಯ ಎಡಿಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು.
ಕೇರಳದ ಪಕ್ಷೇತರ ಶಾಸಕ ಪಿ.ಎ. ಅನ್ವರ್ ಅವರೂ ಅಜಿತ್ ಕುಮಾರ್ ವಿರುದ್ಧ ವಿವಿಧ ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸಿದ್ದಾರೆ.