ಕಾಸರಗೋಡು : ಜಿಲ್ಲಾ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿನಗರ, ಕುತ್ತಿಕೋಲು ಪ್ರೀ ಮೆಟ್ರಿಕ್ ಹಾಸ್ಟೆಲ್‍ಗಳ ಹಾಗೂ ರಾವಣೇಶ್ವರ ಪೆÇೀಸ್ಟ್ ಮೆಟ್ರಿಕ್ ಹಾಸ್ಟೆಲ್‍ಗಳ ವಿದ್ಯಾರ್ಥಿಗಳನ್ನು ಡಿ.27ರಿಂದ 29ರ ವರೆಗೆ ವಯನಾಡು ಮಾನಂದವಾಡಿ ಜಿ.ವಿ.ಎಚ್.ಎಸ್.ನಲ್ಲಿ ನಡೆಯುವ ಸರ್ಗೋತ್ಸವದಲ್ಲಿ ಭಾಗವಹಿಸಲು, 27 ಮಂದಿ ವಿದ್ಯಾರ್ಥಿಗಳು ಹಾಗೂ ಅವರ ಜತೆಗೆ ಮೂವರು ಸಿಬ್ಬಂದಿಯನ್ನು ಕರೆದೊಯ್ಯಲು ನಾನ್ ಎ.ಸಿ ಬಸ್ ಒದಗಿಸಲು ಸಿದ್ಧರಿರುವ ಮಾಲಿಕರು ಯಾ ಸಂಸ್ಥೆಯಿಂದ ಕೊಟೇಶನ್ ಆಹ್ವಾನಿಸಲಾಗಿದೆ.
ಡಿ. 26ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಪರಿಶಿಷ್ಟ ವರ್ಗ ಅಭಿವೃದ್ಧಿ ಕಛೇರಿಯಿಂದ ಮಾನಂದವಾಡಿಯ ಸರ್ಗೋತ್ಸವ ನಗರಕ್ಕೆ ತಲುಪಿಸಲು ಹಾಗೂ ಸರ್ಗೋತ್ಸವ ಕಳೆದ ನಂತರ ಡಿ. 29ರಂದು ಹಿಂತಿರುಗಿಸಿ ಕುತ್ತಿಕ್ಕೋಲು, ರಾವಣೇಶ್ವರ ಎಂಬೀ ಸ್ಥಳಗಳಿಗೆ ತಲುಪಿಸಬೇಕು. ಅಲ್ಲದೆ 27ರಿಂದ 29ರ ವರೆಗಿನ ಕಾಲಾವಧಿಯಲ್ಲಿ ಮಾನಂದವಾಡಿಯ ವಾಸಸ್ಥಳದಿಂದ ಸರ್ಗೋತ್ಸವ ನಗರಕ್ಕೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಲುಪಿಸಬೇಕಾಗಿದೆ. ಕಿಲೋ ಮೀಟರ್‍ಗೆ ಕನಿಷ್ಠ ದರವನ್ನು ನಿಗದಿಪಡಿಸುವ ಮೂಲಕ ಕೊಟೇಶನ್ ಒದಗಿಸಬೇಕಾಗಿದೆ. ಕೊಟೇಶನ್ ಡಿಸೆಂಬರ್ 17 ರಂದು ಸಂಜೆ 3ಕ್ಕೆ ಮೊದಲು ಕಾಸರಗೋಡು ಪರಿಶಿಷ್ಟ ವರ್ಗ ಅಭಿವೃದ್ಧಿ ಕಛೇರಿಗೆ ಲಭ್ಯವಾಗುವಂತೆ ಮಾಡಬೇಕು. ಅಂದು ಸಂಜೆ 3.30ಕ್ಕೆ ಕೊಟೇಶನ್ ತೆರೆಯಲಾಗುವುದು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994-255466)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.