ಬದಿಯಡ್ಕ: ನೀರ್ಚಾಲು ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಮಹೋತ್ಸವ ವಿಜೃಂಭಣೆಯಿಂದ ಜರಗಿತು. ಬೆಳಗ್ಗೆ ಗಣಪತಿ ಹೋಮ, ವೇದಪಾರಾಯಣ, ನವಕಾಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಸಂಜೆ ದೀಪಾರಾಧನೆ, ತಾಯಂಬಕಂ, ಸಂಜೆ ಏಣಿಯರ್ಪು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದವರಿಂದ ಹುಲ್ಪೆ ಮೆರವಣಿಗೆ, ರಾತ್ರಿರಂಗಪೂಜೆ, ಉತ್ಸವ ಬಲಿ, ಬೇಳದ ಅಶ್ವತ್ಥಕಟ್ಟೆಗೆ ಶ್ರೀದೇವರ ಘೋಷಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ, ಮಧ್ಯರಾತ್ರಿ ರಾಜಾಂಗಣ ಪ್ರಸಾದ ಮತ್ತು ಮಂತ್ರಾಕ್ಷತೆ, ಮಂಗಳಶಯನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.