ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರಗಿದ ಕೋಟಿ ಪಂಚಾಕ್ಷರಿ ಜಪಯಜ್ಞ ಹಾಗೂ ಶ್ರೀಚಕ್ರ ಪೂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ಭಗೀರಥ ಯತ್ನ ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಇತ್ತೀಚೆಗೆ ಚನೈಯಲ್ಲಿ ಸಮಾಜಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಹಾಗೂ ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು ಶಾಲುಹೊದಿಸಿ ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕøತರ ಕಲೈಮಾಮಣಿ ಶ್ರೀ ವೀರಮಣಿ ರಾಜು ಫಲಪುಷ್ಪ ದೊಂದಿಗೆ ಆಡಳಿತ ಸಮಿತಿ ಅಧ್ಯಕ್ಷ ಅಡ್ವ. ಗೋವಿಂದನ್ ನಾಯರ್ ಪೇಟ ತೊಡಿಸಿ ಕ್ಷೇತ್ರ ತಂತ್ರಿವರ್ಯ ಧನ್ವಿನ್ ಪದ್ಮನಾಭ ತಂತ್ರಿ ಪ್ರಶಸ್ತಿ ಫಲಕವನ್ನಿತ್ತು ಅರ್.ಎಸ್.ಎಸ್. ಪ್ರಮುಖ ಜಗನ್ನಥ್ ಸ್ಮರಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಯಜ್ಞ ಸಮಿತಿಯ ಅಧ್ಯಕ್ಷ ಡಾ. ಅನಂತ ಕಾಮತ್, ಕಾರ್ಯಾಧ್ಯಕ್ಷ ರಾಮ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ಪಿ. ರಮೇಶ್, ಪ್ರಚಾರ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ಮಹಿಳಾ ಸಮಿತಿಯ ಶಾರದ, ಉಷಾ ಅರ್ಜುನ್, ನಗರಸಭಾ ಸದಸ್ಯೆ ಶ್ರೀಲತಾ ಟೀಚರ್ ಉಪಸ್ಥಿತರಿದ್ದರು ವಿ.ಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.