ಕಾಸರಗೋಡು: ವಿಶ್ವಪ್ರಸಿದ್ಧ ಬೇಕಲ ಕೋಟೆ ಹಾಗೂ ಆಸುಪಾಸಿನ ಸೊಬಗು ಸವಿದ ಜಾಖರ್ಂಡ್ ಮುಖ್ಯಮಂತ್ರಿ ಹೇಮಂತ್ ಸೊರನ್ ಶನಿವಾರ ಜಾರ್ಖಂಡ್‍ಗೆ ವಾಪಸಾಗಿದ್ದಾರೆ. ವಿಶ್ರಾಂತಿಗಾಗಿ ಡಿ. 18ರಂದು ಬಜ್ಪೆ ವಿಮಾಣ ನಿಲ್ದಾಣ ಮೂಲಕ ಬೇಕಲಕ್ಕೆ ಆಗಮಿಸಿದ್ದ ಇವರು ಟಾಟಾ ಸಮೂಹ ಸಂಸ್ಥೆಯ ತಾಜ್ ವಿವೆಂಟಾದಲ್ಲಿ ತಂಗಿದ್ದು, ನಾಲ್ಕು ದಿವಸಗಳ ಕಾಳ ಬೇಖಲಕೋಟೆ ಹಾಗೂ ಆಸುಪಾಸಿನ ಸೌಂದರ್ಯ ಸವಿದರು. ಅವರು ವಲಿಯಪರಂಬ ಹಿನ್ನೀರಿನ ಹೌಸ್‍ಬೋಟ್‍ನಲ್ಲಿ ಪ್ರಯಾಣಿಸುವ ಮೂಲಕ ಕೇರಳದ ಸೌಂದರ್ಯ ಮತ್ತು ಇಲ್ಲಿನ ಜನರ ಆಚಾರ, ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬೇಕಲಕೋಟೆಯ ಸೊಬಗು ಹಾಗೂ ಕರಾವಳಿಯ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೇರಳ ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ ಮುಹಮ್ಮದ್ ರಿಯಾಜ್ ಅವರೊಂದಿಗೆ ಆನ್‍ಲೈನ್ ಭೇಟಿಯೊಂದಿಗೆ ಮಾತುಕತೆ ನಡೆಸಿದ ನಂತರ ಜಾಖರ್ಂಡ್‍ಗೆ ಬರುವಂತೆ ಆಹ್ವಾನ ನೀಡಿದರು.
ಮೂರು ದಿನಗಳ ಭೇಟಿಗಾಗಿ ಆಗಮಿಸಿದ ಹೇಮಂತ್‍ಸೊರೇನ್ ಒಂದು ದಿನ ಹೆಚ್ಚುವರಿಯಾಗಿ ತಂಗಿದ್ದರು. ಬೇಕಲ್ ರೆಸಾರ್ಟ್‍ಗಳ ಅಭಿವೃದ್ಧಿ ನಿಗಮದ ಬಿಆರ್‍ಡಿಸಿ ವ್ಯವಸ್ಥಾಪಕನಿರ್ದೇಶಕ ಪಿ ಶಿಜಿನ್ ಅವರು ಕೇರಳದ ಸಾಂಪ್ರದಾಯಿಕ ಉಡುಗೊರೆಯನ್ನು ಜಾಖರ್ಂಡ್ ಮುಖ್ಯಮಂತ್ರಿ ಹೇಮಂತ್ ಸೊರನ್ ಅವರಿಗೆ ಹಸ್ತಾಂತರಿಸಿದರು.