ತಿರುವನಂತಪುರಂ: ಸಿಪಿಎಂ ತೊರೆದು ಬಿಜೆಪಿ ಸೇರಿರುವ ಬಿಪಿನ್ ಸಿ ಬಾಬು ಹಾಗೂ ಮಧು ಮುಲ್ಲಸ್ಸೆರಿ ಬಿಜೆಪಿ ರಾಜ್ಯ ಸಮಿತಿಗೆ ಸೇರ್ಪಡೆಯಾಗಿದ್ದಾರೆ.
ಇವರಿಬ್ಬರನ್ನೂ ರಾಜ್ಯ ಸಮಿತಿ ಸದಸ್ಯರನ್ನಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನಾಮನಿರ್ದೇಶನ ಮಾಡಿರುವರು.
ಸಿಪಿಎಂ ಮಂಗಳಪುರಂ ಪ್ರದೇಶ ಕಾರ್ಯದರ್ಶಿ ಮಧು ಮುಲಸ್ಸೆರಿ ಮತ್ತು ಅವರ ಪುತ್ರ ಮಿಥುನ್ ಮುಲ್ಲಸ್ಸೆರಿ ಮೊನ್ನೆಯಷ್ಟೇ ತಿರುವನಂತಪುರದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಸಿಪಿಎಂ ತಿರುವನಂತಪುರಂ ಜಿಲ್ಲಾ ಕಾರ್ಯದರ್ಶಿಯನ್ನು ಟೀಕಿಸಿದ ನಂತರ ಮುಲ್ಲಸ್ಸೆರಿ ಮಧು ಪಕ್ಷ ತೊರೆದಿದ್ದರು.
ಸಿಪಿಎಂ ಆಲಪ್ಪುಳ ಪ್ರದೇಶ ಸಮಿತಿ ಸದಸ್ಯ ಅಡ್ವ. ಬಿಪಿನ್ ಸಿ ಬಾಬು ಅವರು ನವೆಂಬರ್ 30 ರಂದು ಬಿಜೆಪಿಗೆ ಸೇರ್ಪಡೆಗೊಂಡರು, ಜಿಲ್ಲೆಯಲ್ಲಿ ಸಿಪಿಎಂನಲ್ಲಿ ಗುಂಪುಗಾರಿಕೆ ತೀವ್ರಗೊಂಡಾಗ ಬಿಪಿನ್ ಪಕ್ಷವನ್ನು ತೊರೆದಿದ್ದರು.