ಪೋರಬಂದರ್, ಗುಜರಾತ್: ಭಾರತೀಯ ಸೇನೆಯ ಯೋಧನಂತೆ ಸಮವಸ್ತ್ರ ತೊಟ್ಟು ಜನರನ್ನು ವಂಚಿಸಲು ಹವಣಿಸುತ್ತಿದ್ದ ವ್ಯಕ್ತಿಯನ್ನು ಗುಜರಾತ್‌ನ ಪೋರಬಂದರ್ ನಗರ ಪೊಲೀಸರು ಶನಿವಾರ ಬಂಧಿಸಿದ್ದರು.
ರಾಜ್‌ಕೋಟ್ ಜಿಲ್ಲೆಯ 36 ವರ್ಷದ ಸಂಜಯ್ ದೋಡಿಯಾ ಎನ್ನುವುನೇ ಬಂಧಿತ ವ್ಯಕ್ತಿ.
ಪೋರಬಂದರ್‌ನ ಕಮಲಾ ಬಾಗ್ ಪ್ರದೇಶದಲ್ಲಿ ಸೇನಾ ಸಮವಸ್ತ್ರದಲ್ಲಿ ತಿರುಗಾಡುತ್ತಿದ್ದ ಸಂಜಯ್, ಕೆಲವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಕಮಲಾ ಬಾಗ್ ಪೊಲೀಸ್ ಠಾಣೆ ಸಿಬ್ಬಂದಿ ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.
ಬಂಧಿತ ಸಂಜಯ್ ದೋಡಿಯಾ ವಿರುದ್ಧ ಬಿಎನ್‌ಎಸ್ ಕಲಂ 168 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಎನ್‌ಎಸ್ 168ರ ಕಲಂ ಅನಧಿಕೃತವಾಗಿ ಭಾರತದ ಸೇನಾಪಡೆ, ಅರೆ ಸೇನಾಪಡೆ, ಪೊಲೀಸ್ ಪಡೆಗಳ ಸಮವಸ್ತ್ರ, ಸಮವಸ್ತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ನಕಲು ಮಾಡುವುದನ್ನು ನಿಷೇಧಿಸುತ್ತದೆ. ಇದನ್ನು ಉಲ್ಲಂಘಿಸಿದವರಿಗೆ ಮೂರು ತಿಂಗಳು ಜೈಲು ಶಿಕ್ಷೆ ಅಥವಾ ₹2 ಸಾವಿರ ದಂಡ ವಿಧಿಸಲಾಗುತ್ತದೆ.