ಮಂಜೇಶ್ವರ: ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು ಇದರ ಕೊರಗ ವಿಶೇಷ ಯೋಜನೆಯ ನೇತೃತ್ವದಲ್ಲಿ ನೆರೆಕರೆ ಸಭೆಯನ್ನು ಮಂಗಳವಾರ ಆಯೋಜಿಸಲಾಗಿತ್ತು. ಮಂಜೇಶ್ವರ ಕಲಾ ಸ್ಪರ್ಶ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 350 ಕೊರಗ ನೆರೆಕರೆ ಸದಸ್ಯರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ನೆರೆಕರೆ ಸಭೆ ಹಾಗೂ ಹಸಿರು ಸಂಘ ಘೋಷಣೆಗೆ ಚಾಲನೆ ನೀಡಿದರು. ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಯೋಜನೆ ವಿವರಿಸಿದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳು, ಎಡಿಎಂಸಿ ಕಿಶೋರ್ ಕುಮಾರ್ ಭಾಗವಹಿಸಿದ್ದರು. ಕೊರಗ ಹಿರಿಯ ನಾಗರಿಕರನ್ನು ಸ್ಮರಣಿಕೆ ನೀಡಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯ ಪ್ರದರ್ಶಿಸಿದವರನ್ನು ಸನ್ಮಾನಿಸಿದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಮಂಜೇಶ್ವರ ಸಿಡಿಎಸ್ ಅಧ್ಯಕ್ಷೆ ಜಯಶ್ರೀ ಸ್ವಾಗತಿಸಿ, ಕೊರಗ ವಿಶೇಷ ಯೋಜನೆಯ ಸಹಾಯಕ. ಸಂಯೋಜಕ ಎಸ್.ಯದುರಾಜ್ ವಂದಿಸಿದರು.