ಕುವೈತ್ ಸಿಟಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುವೈತ್‌ನ ಅತ್ಯುನ್ನತ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಅನ್ನು ನೀಡಿ ಗೌರವಿಸಲಾಗಿದೆ. ಇದು ಮೋದಿ ಅವರಿಗೆ ದೊರೆತ 20ನೇ ಅಂತರರಾಷ್ಟ್ರೀಯ ಗೌರವವಾಗಿದೆ.
ಕುವೈತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುವೈತ್‌ನ ರಾಜ ಶೇಕ್ ಮಿಶಾಲ್ ಅಲ್ ಅಹಮದ್ ಅಲ್ ಜಾಬೆರ್ ಸಬಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ನೀಡಿ ಸನ್ಮಾನಿಸಿದ್ದಾರೆ.