ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ವೈದ್ಯಕೀಯ ಕಛೇರಿ ಆರೋಗ್ಯ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ವತಿಯಿಂದ ಮಕ್ಕಳಿಗಾಗಿ ಪೆÇೀಷಕಾಂಶಗಳ ವಿತರಣೆ, ವಸ್ತು ಪ್ರದರ್ಶನ ಕಾರ್ಯಕ್ರಮ'ನ್ಯೂಟ್ರಿಶಾಪ್' ಕಾಸರಗೋಡು ಐಮ್ಯಾಕ್ಸ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸುವುದು, ಪೌಷ್ಟಿಕಾಂಶದ ತಿನಿಸು ಮತ್ತು ಊಟವನ್ನು ಪರಿಚಯಿಸುವುದು, ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಜೀವನಶೈಲಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ನ್ಯೂಟ್ರಿಶಾಪ್ ಆಯೋಜಿಸಲಾಗಿತ್ತು. ಈ ಸಂದರ್ಭ ಆರೋಗ್ಯಕರ ಆಹಾರದ ಪರಿಚಯದೊಂದಿಗೆ ಮಕ್ಕಳಿಗೆ ಉಚಿತ ಪೌಷ್ಠಿಕ ಆಹಾರ ಮತ್ತು ದ್ರವಾಹಾರ ವಿತರಿಸಲಾಯಿತು. ವಿಶೇಷವಾಗಿ ಸಜ್ಜುಗೊಳಿಸಲಾದ ಈ ಶಾಪ್‍ನಲ್ಲಿ ಆರೋಗ್ಯಕರ ಪೇಯಗಳು, ಸ್ಮಾರ್ಟ್ ತಿಂಡಿಗಳ ಜತೆಗೆ ರಸಪ್ರಶ್ನೆ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯೋಜಿಸಿರುವ ದಿಶಾ ಪ್ರದರ್ಶನದ ಅಂಗವಾಗಿ, ಆರೋಗ್ಯ ಇಲಾಖೆಯು ನವೆಂಬರ್ 29 ಮತ್ತು 30 ರಂದು ಜಿಎಚ್‍ಎಸ್‍ಎಸ್ ಬಲಾಳ್ ಈಸ್ಟ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಆರೋಗ್ಯಕರ ಆಹಾರ ಮಳಿಗೆಯಲ್ಲಿ ಆರೋಗ್ಯಕರ ಆಹಾರ ಮಳಿಗೆಯನ್ನು ಸಿದ್ಧಪಡಿಸಲಾಯಿತು. ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಆಹಾರ ತಜ್ಞರಾದ ಶ್ರುತಿ ಕೆ, ಮೃದುಲಾ ಅರವಿಂದ್ ಮತ್ತು ಸುಚಿತ್ರಾ ಕೆ. ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ನಡೆದ ಪ್ರದರ್ಶನದಲ್ಲಿ ಸುಮಾರು 8000 ಮಕ್ಕಳು ಭಾಗವಹಿಸಿದ್ದರು. ಇಂದಿನ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮವು ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಲು ಪೆÇ್ರೀತ್ಸಾಹಿಸಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ.ರಾಮದಾಸ್ ಹೇಳಿದರು.