HEALTH TIPS

ಇಂದು ಕುಮಾರಮಂಗಲ ಷಷ್ಠೀ ಮಹೋತ್ಸವ

ಬದಿಯಡ್ಕ: ನೀರ್ಚಾಲು ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠೀ ಮಹೋತ್ಸವ ಇಂದು(ಡಿ.7) ಜರಗಲಿರುವುದು. ಡಿ.6ರಂದು ಶುಕ್ರವಾರ ಸಂಜೆ 4ಕ್ಕೆ ನೀರ್ಚಾಲು ಅಶ್ವತ್ಥಕಟ್ಟೆಯಿಂದ ಹಾಗೂ ಶ್ರೀದೇವಿ ಭಜನಾ ಮಂದಿರ ಸೀತಾಂಗೋಳಿಯಿಂದ ಉತ್ಸವಕ್ಕಿರುವ ಹಸಿರುವಾಣಿ ಹೊರೆಕಾಣಿಕೆ ನಡೆಯಿತು.


 ಇಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, ವೇದಪಾರಾಯಣ, 7 ಗಂಟೆಗೆ ನವಕಾಭಿಷೇಕ, 10ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ದೀಪಾರಾಧನೆ, ತಾಯಂಬಕಂ, ಸಂಜೆ 6.30ಕ್ಕೆ ಏಣಿಯರ್ಪು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 7ಗಂಟೆಗೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದವರಿಂದ ಹುಲ್ಪೆ ಮೆರವಣಿಗೆ, ರಾತ್ರಿ 7ಕ್ಕೆ ರಂಗಪೂಜೆ, ಉತ್ಸವ ಬಲಿ, ರಾತ್ರಿ 10ಕ್ಕೆ ಬೇಳದ ಅಶ್ವತ್ಥಕಟ್ಟೆಗೆ ಶ್ರೀದೇವರ ಘೋಷಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ, ಮಧ್ಯರಾತ್ರಿ 12 ಕ್ಕೆ ರಾಜಾಂಗಣ ಪ್ರಸಾದ ಮತ್ತು ಮಂತ್ರಾಕ್ಷತೆ, ಮಂಗಳಶಯನ. ಡಿ.8 ಭಾನುವಾರ ಬೆಳಗ್ಗೆ 8.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಏಣಿಯರ್ಪು ತರವಾಡು ಮನೆಗೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹಿಂತಿರುಗುವುದು. 




ಸಾಂಸ್ಕøತಿಕ ಕಾರ್ಯಕ್ರಮಗಳು :

ಡಿ.7ರಂದು ಪೂರ್ವಾಹ್ನ 7ರಿಂದ 10ರ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ, 10.30ರಿಂದ 12ರ ತನಕ ಕಲಾರತ್ನ ಶಂ.ನಾ.ಅಡಿಗರ ಕೀರ್ತನ ಕುಟೀರದ ವಿದ್ಯಾರ್ಥಿಗಳಿಂದ ಧÀನ್ಯಶ್ರೀ ಪಡಾರು ಮತ್ತು ಬಳಗ ಹರಿಕಥಾ ಸತ್ಸಂಗ, ಮಧ್ಯಾಹ್ನ 12 ರಿಂದ 2ರ ತನಕ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದಲ್ಲಿ ಸಾಹಿತ್ಯ ಗಾನ ನೃತ್ಯ ವೈಭÀವ, ಅಪರಾಹ್ನ 2ರಿಂದ 5ರ ತನಕ ಯಕ್ಷಭಾರತಿ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6ರಿಂದ 6.30 ನಾಟ್ಯವಿದ್ಯಾಲಯ ಕುಂಬಳೆ ಇದರ ನೃತ್ಯನಿರ್ದೇಶಕಿ ವಿದುಷಿ ಡಾ. ವಿದ್ಯಾಲಕ್ಷ್ಮೀ ಬೇಳ ಇವರ ಶಿಷ್ಯೆಯರಿಂದ ನೃತ್ಯ ಸಂಭ್ರಮ, ರಾತ್ರಿ 11ರಿಂದ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಶಾಂಭವಿ ವಿಜಯ ಪ್ರದರ್ಶನಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries