ಪೆರ್ಲ : ಮಂಡಲಪರ್ವ ಆಚರಿಸಿಕೊಳ್ಳುತ್ತಿರುವ ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದ 48ನೇ ವಾರ್ಷಿಕೋತ್ಸವ ಅಂಗವಾಗಿ ಇದೇ ಮೊದಲಬಾರಿಗೆ ಆಯೋಜಿಸಲಾದ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.
(ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಅಂಗವಾಗಿ ಶ್ರೀ ಅಯ್ಯಪ್ಪ ಸ್ವಾಮಿ-ವಾವರ ಸ್ವಾಮಿಯ ನಡುವಿನ ಯುದ್ಧದ ಸನ್ನಿವೇಶವನ್ನು ಪ್ರಸ್ತುತಪಡಿಸಲಾಯಿತು.)ಶ್ರೀ ಅಯ್ಯಪ್ಪ ಸ್ವಾಮಿಯ ಹುಟ್ಟು, ಮಾಳಿಗಪುರತ್ತಮ್ಮ, ವಾವರ ಸ್ವಾಮಿಯ ಚರಿತ್ರೆ ಬಿಂಬಿಸುವ ತಿರುವಿಳಕ್ಕ್ ಮಹೋತ್ಸವ, ಅಯ್ಯಪ್ಪ ವ್ರತಧಾರಿಗಳ ಕೆಂಡಸೇವೆ ಗಮನಸೆಳೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ವಾವರ ಸ್ವಾಮಿಯ ನಡುವಿನ ಯುದ್ಧದ ಸನ್ನಿವೇಶವನ್ನು ಮಾರ್ಮಿಕವಾಗಿ ಪ್ರಸ್ತುತಪಡಿಸಲಾಗಿತ್ತು. ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ, ಮಾಳಿಗಪುರತ್ತಮ ಹಾಗೂ ವಾವರ ಸ್ವಾಮಿಯ ಗುಡಿಗಳ ಸುಂದರ ಪ್ರತಿಕೃತಿಳನ್ನು ಬಾಳೆ ದಿಂಡಿನ ಮೂಲಕ ರಚಿಸಿ, ಇದರಲ್ಲಿ ಸ್ವಾಮಿಯ ಇರುವಿಕೆಯನ್ನು ಆವಾಹಿಸುವ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿಯ ಜೀವನ ವೃತ್ತಾಂತವನ್ನು ಚಿತ್ರೀಕರಿಸಲಾಗುತ್ತದೆ. ವೆಳಕ್ಕ್ ಮಹೋತ್ಸವದಲ್ಲಿ ಖ್ಯಾತಿ ಪಡೆದಿರುವ ಕುಟ್ಟಿಪುರಂನ ದಿ. ಚೇಕನ್ನೂರ್ ಕೃಷ್ಣನ್ ಕುಟ್ಟಿ ಅವರ ಪುತ್ರ ಅಪ್ಪು ಅವರ ನೇತೃತ್ವದ 'ಶ್ರೀ ಮಣಿಕಂಠ ಬೆಳಕಿನ ಸಂಘ'ದ 25ಮಂದಿ ಸದಸ್ಯರನ್ನೊಳಗೊಂಡ ತಂಡ ತಿರುವಿಳಕ್ಕ್ ಮಹೋತ್ಸವ ನಡೆಸಿಕೊಟ್ಟಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಇಡಿಯಡ್ಕ ದೇವಸ್ಥಾನ ವಠಾರದಿಂದ ವಿಶೇಷ ಪಾಲೆಕೊಂಬು ಮೆರವಣಿಗೆ, ಖ್ಯಾತ ಹಿನ್ನೆಲೆ ಗಾಯಕ ಸನ್ನಿದಾನಂದನ್ ಗುರುವಾಯೂರು ವತಿಯಿಂದ ಬಕ್ತಿ ಗಾನಮೇಳ ನಡೆಯಿತು.