ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಹಾಗೂ ಪ್ರಾದೇಶಿಕ ಭಯೋತ್ಪಾದಕರ ಜಾಲಗಳ ವಿರುದ್ಧ ಪಾಕಿಸ್ತಾನವು ಗಣನೀಯವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವರದಿಯೊಂದು ಹೇಳಿದೆ.
'2023ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ಪ್ರಕರಣಗಳು ತೀವ್ರ ಏರಿಕೆಯಾಗಿದ್ದು, ಗಂಭೀರ ಭದ್ರತಾ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
ಪಾಕಿಸ್ತಾನದಲ್ಲಿ ಈಗ 41 ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ' ಎಂದೂ ಅದು ಹೇಳಿದೆ.
ಈ ಕುರಿತು ವರದಿ ಮಾಡಿರುವ 'ಡಾನ್' ಪತ್ರಿಕೆಯು 'ಈ ವಾರದಲ್ಲಿ ಅಮೆರಿಕದ ವರದಿಯು ಬಿಡುಗಡೆಯಾಗಿದೆ. 2023ರಲ್ಲಿ ಹಣ ಅಕ್ರಮ ವರ್ಗಾವಣೆ ಹಾಗೂ ಹಾಗೂ ಭಯೋತ್ಪಾದಕರಿಗೆ ನಿಧಿ ಸಂಗ್ರಹ ವಿಚಾರದಲ್ಲಿ ವಿಶ್ವಸಂಸ್ಥೆಯ ನಿಯಮಗಳ ಅನುಸಾರವಾಗಿ ಪಾಕಿಸ್ತಾನ ಕೈಗೊಂಡ ಕ್ರಮಗಳನ್ನು ವರದಿಯಲ್ಲಿ ಶ್ಲಾಘಿಸಲಾಗಿದೆ' ಎಂದು ಹೇಳಿದೆ.