ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್ನೆಸ್ಸೆಸ್ ಶಿಬಿರದ"ಸ್ನೇಹ ಸಂದರ್ಶನಂ" ಭಾಗವಾಗಿ ಸೋಮವಾರ ಬೆಳಗ್ಗೆ ಪಡ್ರೆ ಸೂರಂಬೈಲುಕಟ್ಟೆಯ ದಿ.ಸುಬ್ರಾಯ ಆಚಾರ್ಯರ ಪತ್ನಿ ಸಾವಿತ್ರಿ ಅವರನ್ನು ಭೇಟಿ ನೀಡಿ ಕುಶಲೋಪರಿ ವಿಚಾರಿಸಲಾಯಿತು. ಸ್ವರ್ಗ ವಾರ್ಡ್ ಸದಸ್ಯ ರಾಮಚಂದ್ರ ಎಂ.ಜತೆಗಿದ್ದರು.