HEALTH TIPS

ಉತ್ತರಪ್ರದೇಶ | ಉಪನಾಮಗಳ 'ಹುಡುಕಾಟ'ದಲ್ಲಿ ಮುಸ್ಲಿಮರು: ಹಿಂದೂ ಸಂಘಟನೆ ಪ್ರೇರೇಪಣೆ

ಜೌನಾಪುರ:ಉತ್ತರ ಪ್ರದೇಶದ ಜೌನಾಪುರ ಜಿಲ್ಲೆಯ ದೆಹ್ರಿ ಗ್ರಾಮದ ಅನೇಕ ಮುಸಲ್ಮಾನ ಕುಟುಂಬಗಳ ಸದಸ್ಯರ ಹೆಸರಿನ ಜೊತೆಗೆ ಹಿಂದೂ ಉಪನಾಮಗಳು ಸೇರಿಕೊಂಡಿವೆ. ದುಬೆ, ಪಾಂಡೆ, ತಿವಾರಿ ಎಂಬುದು ಉಪನಾಮಗಳಾಗಿವೆ. 'ನಮ್ಮ ಪೂರ್ವಜರು ಹಿಂದೂಗಳು' ಎಂಬ ಕಾರಣ ನೀಡಲಾಗುತ್ತಿದೆ.

ಉತ್ತರ ಪ್ರದೇಶದ ಪೂರ್ವಾಂಚಲ ವಲಯದ ಈ ಜಿಲ್ಲೆಯ ಗ್ರಾಮದಲ್ಲಿ ಸದ್ದಿಲ್ಲದೇ 'ವಿಭಿನ್ನ ಪರಿವರ್ತನೆ'ಯ ಕಾರ್ಯ ನಡೆದಿದೆ. ಧಾರ್ಮಿಕ ಬಿಕ್ಕಟ್ಟು ತಡೆಯಲು, ಪರಿವರ್ತನೆಗೆ ಪ್ರೇರೇಪಿಸುವುದರ ಗುರಿಯಿಂದಾಗಿ ಇದು ಸಾಧ್ಯವಾಗಿದೆ ಎನ್ನುತ್ತಾರೆ ಸಂಘಟಕರು.

'ಧಾರ್ಮಿಕ ಬಿಕ್ಕಟ್ಟು ಕೊನೆಗಾಣಿಸಲು ಜನರು ಮೂಲಬೇರುಗಳ ಜೊತೆಗೆ ಮರುಸಂಪರ್ಕ ಹೊಂದಬೇಕು' ಎಂದು 'ವಿಶಾಲ ಭಾರತ ಸಂಸ್ಥಾನ'ವು ಅಭಿಯಾನ ಕೈಗೊಂಡಿದೆ. ಸ್ಥಳೀಯ ಸಂಘಟನೆಯ ಈ ಅಭಿಯಾನವೇ ಮುಸ್ಲಿಮ್‌ ನಿವಾಸಿಗಳನ್ನು ಪ್ರೇರೇಪಿಸುತ್ತಿದೆ.

ಈಗ 'ದುಬೆ' ಉಪನಾಮವನ್ನು ಸೇರಿಸಿಕೊಂಡಿರುವ ನೌಶಾದ್‌ ಅಹ್ಮದ್, 'ನನ್ನ ಪೂರ್ವಜರು ಬ್ರಾಹ್ಮಣರು ಎಂದು ತಿಳಿದುಕೊಂಡೆ. ನನ್ನ ತಂದೆಯ ಹೆಸರು ಲಾಲ್‌ಬಹದ್ದೂರ್ ದುಬೆ. ಅವರನ್ನು ಲಾಲ್‌ ಬಹದ್ದೂರ್ ಶೇಖ್‌ ಎಂದು ಗುರುತಿಸಲಾಗುತ್ತಿತ್ತು' ಎನ್ನುತ್ತಾರೆ.

'ದೆಹ್ರಿ ಗ್ರಾಮದ ನಿವಾಸಿಯಾದ ಅವರು, ನಮಾಜ್‌, ಉಪವಾಸ ಸೇರಿದಂತೆ ನಾನು ಇಸ್ಲಾಂ ಆಚರಣೆಗಳನ್ನು ಪಾಲಿಸುತ್ತೇನೆ. ಜತೆಗೆ ಈಗ ಗೋವುಗಳನ್ನೂ ಸಾಕುತ್ತಿದ್ದೇನೆ. ಸದ್ಯ ನನ್ನ ಬಳಿ ಒಂಬತ್ತು ಗೋವುಗಳಿವೆ' ಎನ್ನುತ್ತಾರೆ.

'ನಾನು ಧರ್ಮ ಬದಲಿಸಿಲ್ಲ. ಪೂರ್ವಜರನ್ನು ಗೌರವಿಸಲು ಉಪನಾಮ ಬದಲಿಸಿಕೊಂಡಿದ್ದೇನೆ' ಎನ್ನುತ್ತಾರೆ. ಆದರೆ, ಇವರ ಕುಟುಂಬದ ಅನ್ಯ ಸದಸ್ಯರ ಹೆಸರಿಗೆ ಉಪನಾಮ ಸೇರಿಲ್ಲ. ಶೇಖ್‌ ಅಬ್ದುಲ್ಲಾ ದುಬೆ ಅವರು ಹೆಸರು ಬದಲಿಸಿಕೊಂಡಿದ್ದರೂ ಇಸ್ಲಾಂ ಆಚರಣೆ ಪಾಲಿಸುತ್ತಾರೆ. ಮೂರ್ತಿಪೂಜೆ ಸೇರಿದಂತೆ ಹಿಂದೂ ಆಚರಣೆಯನ್ನು ಅವರು ನಿರಾಕರಿಸುತ್ತಾರೆ.

ಉಪನಾಮವನ್ನು ಸೇರಿಸಿ ವಿವಾಹ ಆಮಂತ್ರಣದಲ್ಲಿ ಹೆಸರು ಮುದ್ರಿಸಿದ್ದ ನೌಶಾದ್‌ ಅವರೀಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 'ನಾನು ಮತಾಂತರ ಆಗಿದ್ದೇನೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಇದರಿಂದ ಮದುವೆಯನ್ನೇ ರದ್ದುಪಡಿಸಬೇಕಾಯಿತು' ಎನ್ನುತ್ತಾರೆ.

ನೌಶಾದ್‌ ಅವರಿಗೆ ಬೆದರಿಕೆ ಕರೆ ಬಂದಿದ್ದು, ಸ್ಥಳೀಯ ಠಾಣಾಧಿಕಾರಿ ಸಭೆ ನಡೆಸಿದ್ದಾರೆ. 'ಬೆದರಿಕೆ ಹಾಕಿದ್ದವರನ್ನು ಗುರುತಿಸಿ ಕ್ರಮ ಜರುಗಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ.

ಜೌನಾಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವನೀಶ್‌ ಶರ್ಮಾ ಅವರು, 'ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಸದ್ಯ, ಯಾವುದೇ ಪ್ರಕರಣ ದಾಖಲಾಗಿಲ್ಲ' ಎಂದು ಪ್ರತಿಕ್ರಿಯಿಸಿದರು.

ಕುಟುಂಬದ 'ಮೂಲ' ಹುಡುಕುವ ಅಭಿಯಾನ

ಜೌನಾಪುರ: 'ಸ್ಥಳೀಯ ನಿವಾಸಿಗಳಿಗೆ ಕುಟುಂಬದ ಮೂಲಬೇರು ಪೂರ್ವಜರ ‌ಹಿನ್ನೆಲೆ ತಿಳಿಯಲು ಸಂಘಟನೆ ನೆರವಾಗುತ್ತಿದೆ' ಎಂದು ಅಭಿಯಾನ ನಡೆಸುತ್ತಿರುವ ವಿಶಾಲ ಭಾರತ ಸಂಸ್ಥಾನದ ರಾಷ್ಟ್ರೀಯ ಅಧ್ಯಕ್ಷ ರಾಜೀವ್ 'ಗುರೂಜಿ' ಹೇಳಿದರು.

'ಮೂಲಬೇರುಗಳ ಜೊತೆಗೆ ಸಂಪರ್ಕ' ಹೆಸರಿನ ಅಭಿಯಾನಕ್ಕೆ ಹಲವರು ಸ್ಪಂದಿಸಿದ್ದಾರೆ. ಐದು ವರ್ಷಗಳ ಹಿಂದೆಯೇ ಇದು ಆರಂಭವಾಯಿತು. ಎರಡು ವರ್ಷಗಳಿಂದ ಫಲಿತಾಂಶ ಕಾಣಿಸತೊಡಗಿದೆ' ಎಂದು ಈ ಕುರಿತು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದರು.

'ಅಜಂಗಢ ಗಾಜೀಪುರ ವಾರಾಣಸಿ ಸೇರಿ ಹಲವು ಕಡೆ ಇಂತಹ ಅಭಿಯಾನ ನಡೆದಿದೆ. ಹಿಂದೂ ಉಪನಾಮ ಇರಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಗಾಜೀಪುರದ ಇರ್ಷಾದ್‌ ಅಹ್ಮದ್ ಪಾಂಡೆ ರೆಹಾನ್‌ ದುಬೆ ಮಹತ್ತರ ಪಾತ್ರ ವಹಿಸಿದ್ದಾರೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries