ಬದಿಯಡ್ಕ: ಜಯಕೃಷ್ಣಮಾಸ್ಟರ್ ಬಲಿದಾನ ದಿನದ ಅಂಗವಾಗಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ಮಾರ್ಪನಡ್ಕ ಜಯನಗರದಲ್ಲಿ ಭಾನುವಾರ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಪಂಚಾಯತಿ ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ, ನೇತಾರರಾದ ವಾಸುದೇವ ಭಟ್, ಸುರೇಶ್ ಬಿ.ಕೆ, ನಾರಾಯಣ ಮಾರ್ಪನಡ್ಕ, ದಾಮೋದರ, ನಾರಾಯಣ ನಾಯ್ಕ್, ಕೃಷ್ಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.