ಕಾಸರಗೋಡು: ಬಾಂಗ್ಲಾದೇಶದ ಪೌರನೆಂದು ಶಂಕಿಸಲಾಗುವ ಅಸ್ಸಾಂ ನ ಉಗ್ರಗಾಮಿ ಪ್ರಕರಣದಲ್ಲಿ ಎನ್.ಐ.ಎ ಹುಡುಕಾಡುತ್ತಿದ್ದ ತಲೆಮರೆಸಿಕೊಂಡ ಉಗ್ರನೊಬ್ಬನನ್ನು ಕಾಸರಗೋಡು ನೀಲೇಶ್ವರದ ಪಡನ್ನಕಾಡ್ ನಿಂದ ಬಂಧಿಸಲಾಗಿದೆ. ಇಂದು ಬೆಳಿಗ್ಗೆ ಎನ್.ಐ.ಎ ನಡೆಸಿದ ಧಾಳಿಯಲ್ಲಿ ಬಂಧನ ಕಾರ್ಯಾಚರಣೆ ಸಿನಿಮೀಯ ರೀತಿಯಲ್ಲಿ ಯಶಸ್ವಿಯಾಯಿತು.
ಬಂಧಿತನನ್ನು ಎಂ.ಬಿ. ಶಾಬ್ ಶೇಖ್ (34)ಎಂದು ಹೆಸರಿಸಲಾಗಿದೆ. ಅಸ್ಸಾಂನಲ್ಲಿ ನಡೆದ ಉಗ್ರಗಾಮಿ ಕೃತ್ಯದಲ್ಲಿ ಈತನ ವಿರುದ್ಧ ಯುಎಪಿಎ ಕಾಯ್ದೆಯಂತೆ ಕೇಸು ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ಲುಕೌಟ್ ನೋಟೀಸು ಪ್ರಕಟಿಸಲಾಗಿತ್ತು. ಈ ಮಧ್ಯೆ ಈತ ಸುರಕ್ಷಿತ ನೆಲೆ ಅರಸಿ ಕೇರಳಕ್ಕೆ ಬಂದಿರುವನೆಂಬ ಶಂಕೆ ಹಿನ್ನೆಲೆಯಲ್ಲಿ ಹುಡುಕಾಟ ನಡೆಯುತ್ತಿರುವಾಗ ಪಡನ್ನಕ್ಕಾಡ್ ನಲ್ಲಿ ಈತ ಪತ್ತೆಯಾದನು.