ಕುಂಬಳೆ: ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಧನುಪೂಜೆ ಮಹೋತ್ಸವ ಡಿ.16ರಿಂದ ಜ.14ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪ್ರತಿದಿನ ಬೆಳಗ್ಗೆ 5 ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, 6 ಕ್ಕೆ ಮಹಾಪೂಜೆ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧನು ಪೂಜಾ ಸಮಿತಿ ಪದಾಧಿಕಾರಿಗಳಾದ ಡಿ. ದಾಮೋದರನ್, ಡಿ.ಎನ್. ರಾಧಾಕೃಷ್ಣ, ಡಿ .ರಾಜೇಂದ್ರ ರೈ, ಭಾಸ್ಕರ ಡಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ಪ್ರತಿ ವರ್ಷ ಧನುಪೂಜಾ ಮಹೋತ್ಸವವನ್ನು ನಾಡಿನ ಉತ್ಸವ ಪ್ರತೀತಿಯಲ್ಲಿ ಕೊಂಡಾಡುವ ಜಿಲ್ಲೆಯ ಪ್ರಧಾನ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ದೇಲಂಪಾಡಿ ಕ್ಷೇತ್ರಕ್ಕೆ ನೆರೆಯ ಕರ್ನಾಟಕ ಗಡಿ ಭಾಗಗಳಿಂದ ಭಕ್ತ ಜನ ಆಗಮಿಸುತ್ತಾರೆ. ಇದಕ್ಕಾಗಿ ಕ್ಷೇತ್ರ ಪರಿಸರ ಸಜ್ಜುಗೊಂಡಿದ್ದು ವಿವಿಧ ಸಮಿತಿಗಳು ಹಾಗೂ ಊರವರು ಶ್ರಮದಾನದ ಮೂಲಕ ದೇವಸ್ಥಾನದ ಧನುಪೂಜಾ ಮಹೋತ್ಸವದ ಯಶಸ್ವಿ ಕಾರ್ಯದಲ್ಲಿ ತೊಡಗಿಕೊಂಡಿರುವರು.