ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಷಷ್ಠೀ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವರ ಅವಭೃತ ಸ್ನಾನ ಭಾನುವಾರ ನಡೆಯಿತು. ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಶಯನೋತ್ಥಾನ, ಮಂಗಲಾಭಿಷೇಕ, ಶ್ರೀದೇವರ ಅವಭೃತ ಸ್ನಾನಕ್ಕೆ ತೆರಳುವ ಕಾರ್ಯಕ್ರಮ ನಡೆಯಿತು. ಸಂಜೆ ಅವಭೃತ ಸ್ನಾನದಿಂದ ಶ್ರೀದೇವರ ಪುನರಾಗಮನದೊಂದಿಗೆ ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ರಾತ್ರಿ ರಂಗ ಪೂಜೆ , ಹುಲಿಭೂತ ನಡೆಯಿತು.
9ರಂದು ಬೆಳಗ್ಗೆ ಉಗ್ರಾಣ ಶೋಧನೆ, ಮಧ್ಯಾಹ್ನ ಸಮಾರಾಧನೆ, ಸಂಜೆ 7.50ಕ್ಕೆ ಕಾರ್ತಿಕ ಪೂಜೆ ನಡೆಯುವುದು. ಷಷ್ಟಿ ಮಹೋತ್ಸವ ಅಂಗವಾಗಿ ಶನಿವಾರ ಬೀದಿಮಡೆಸ್ನಾನ, ರಾತ್ರಿ ರಥೋತ್ಸವ, ಶ್ರೀದೇವರ ಭಂಡರಮನೆ ವನಕ್ಕೆ ಸವಾರಿ, ಬೆಡಿ ಉತ್ಸವ ನಡೆಯಿತು.