ಮಂಜೇಶ್ವರ: ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ, ಮೀಯಪದವು ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಘಟಕ ಎಂಡೋಡಯಾಬ್ ಚಾರಿಟೇಬಲ್ ಸೊಸೈಟಿ, ವಿಕಾಸ ಮೀಯಪದವು, ಎ. ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಕುಂಟಿಕಾನ, ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಮೀಯಪದವು ವಿದ್ಯಾವರ್ಧಕ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ನಡೆಯಲಿದೆ.
ಬೆಳಗ್ಗೆ 09:30 ರಿಂದ ಮಧ್ಯಾಹ್ನ 02:00 ರವರೆಗೆ ನಡೆಯುವ ಶಿಬಿರದ ಉದ್ಘಾಟನೆಯನ್ನು
ಡಾ. ಪ್ರಶಾಂತ್ ಮಾರ್ಲ, M.S, Mch Urology (ವೈದ್ಯಕೀಯ ನಿರ್ದೇಶರು, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಕುಂಟಿಕಾನ, ಮಂಗಳೂರು)
ನಿರ್ವಹಿಸುವರು.ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ (ಸಂಚಾಲಕರು, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು)ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ. ಕೆ. ಟಿ. ಭಟ್ ಕೆರೆಕೋಡಿ (ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು), ಶ್ರೀಧರ ರಾವ್. ಆರ್. ಎಂ (ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ, ಮೀಯಪದವು), ಡಾ. ಗಣೇಶ್. ಎಚ್. ಕೆ.(ಎಂಡೋಕ್ಕೆ ನೋಲಜಿ ಎಂಡೋಡಯಾಬ್ ಚಾರಿಟೇಬಲ್ ಸೊಸೈಟಿ ಮಂಗಳೂರು), ರಮೇಶ್. ಕೆ. ಎನ್.(ಪ್ರಾಂಶುಪಾಲರು, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು),ಮೃದುಲ. ಕೆ. ಎಂ
(ಮುಖ್ಯೋಪಾಧ್ಯಾಯರು, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು), ಅರವಿಂದಾಕ್ಷ ಭಂಡಾರಿ (ಮುಖ್ಯೋಪಾಧ್ಯಾಯರು, ಶ್ರೀ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ, ಮೀಯಪದವು), ಕೃಷ್ಣಪ್ರಸಾದ್ (ಅಧ್ಯಕ್ಷರು, ರಕ್ಷಕ ಶಿಕ್ಷಕ ಸಂಘ, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು), ಬಿಜಿಮೋಳ್. ಕೆ. ವಿ.(ಅಧ್ಯಕ್ಷರು, ಮಾತೃ ರಕ್ಷಕ ಶಿಕ್ಷಕ ಸಂಘ, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು), ಚಂದ್ರಶೇಖರ. ಎಂ (ಎಸ್. ಪಿ. ಜಿ ಸಂಚಾಲಕರು, ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು) ಮೊದಲಾದವರು ಉಪಸ್ಥಿತರಿರುವರು.