HEALTH TIPS

ಬಂಧಿತ ಉಗ್ರ ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆ ಸಕ್ರಿಯ ಸದಸ್ಯ-ನಕಲಿ ಆಧಾರ್‍ಕಾರ್ಡು, ಪಾನ್ ಕಾರ್ಡು, ಭಾರತೀಯ ಪಾಸ್‍ಪೋರ್ಟ್, ಗುರುತಿನ ಚೀಟಿ ವಶ

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನಕ್ಕಾಡ್‍ನಲ್ಲಿ ತಲೆಮರೆಸಿಕೊಂಡಿದ್ದ ಅಸ್ಸಾಂನಲ್ಲಿ ನಡೆದಿದ್ದ ಉಗ್ರಗಾಮಿ ಪ್ರಕರಣದ ಆರೋಪಿ ಎಂ.ಬಿ ಮಹಮ್ಮದ್ ಶಾಬ್‍ಶೇಖ್(32)ಬಾಂಗ್ಲಾದೇಶದ ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯನಾಗಿರುವುದಾಗಿ ತನಿಖಾ ತಂಡ ಸ್ಪಷ್ಟಪಡಿಸಿದೆ. 


ಎಂ.ಬಿ ಮಹಮ್ಮದ್ ಶಾಬ್‍ಶೇಖ್ ಬಾಂಗ್ಲಾದೇಶದ ಧರಂಪುರ್ ಗ್ರಾಮದ ರಜ್‍ಶಾಹಾ ಸಿಟಿ ನಿವಾಸಿಯಾಗಿದ್ದು, ಬಾಂಗ್ಲಾದಿಂದ ಅಕ್ರಮವಗಿ ಭಾರತದೊಳಗೆ ನುಸುಳಿ ಬಂದಿದ್ದು, ಇಲ್ಲಿ ನಕಲಿ ಆಧಾರ್‍ಕಾರ್ಡು, ಪಾನ್ ಕಾರ್ಡು, ಭಾರತೀಯ ಪಾಸ್‍ಪೋರ್ಟ್, ಗುರುತಿನ ಚೀಟಿಗಳನ್ನು ಗಿಟ್ಟಿಸಿಸಿಕೊಂಡಿದ್ದಾನೆ ಎಂಬುದೂ ತನಿಖೆಯಿಂದ ಬಹಿರಂಗಗೊಂಡಿದೆ. 2018ರಲ್ಲಿ ಈತ ಕಾಸರಗೋಡಿಗೆ ಆಗಮಿಸಿ ನಾನಾ ಕಡೆ ನೆಲೆಸಿದ್ದರೂ, ಕೇರಳದ ಪೊಲೀಸರಿಗೆ ಈತನನ್ನು ವಿಚಾರಿಸುವ ಗೋಜಿಗೇ ಹೋಗಿರಲಿಲ್ಲ. ಚೆರ್ಕಳ, ಚಟ್ಟಂಚಾಲ್, ಕಳನಾಡು, ಉದುಮ ಮುಂತಾದೆಡೆ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಈತ ನಂತರ ತನ್ನ ವಾಸ್ತವ್ಯ ಪಡನ್ನಕ್ಕಾಡಿಗೆ ಸ್ಥಳಾಂತರಿಸಿದ್ದನು. ಈ ಎಲ್ಲಾ ಕಡೆ ವಾಸ್ತವ್ಯಕ್ಕಾಗಿ ಈತ ಪಶ್ಚಿಮ ಬಂಗಾಳದ ನಕಲಿ ವಿಳಾಸ ಹೊಂದಿದ ಗುರುತಿನ ಚೀಟಿಯನ್ನು ತೋರಿಸುತ್ತಿದ್ದನು.  ನಾಲ್ಕು ಮಂದಿ ವಲಸೆಕಾರ್ಮಿಕರ ಜತೆಗೆ ಮಹಮ್ಮದ್ ಶಾಬ್‍ಶೇಖ್ ವಾಸವಾಗಿದ್ದರೂ, ಕಟ್ಟಡ ಮಾಲಿಕಗೆ ನೀಡಿದ್ದ ಹೆಸರಲ್ಲಿ ಈತನ ಹೆಸರು ಒಳಗೊಂಡಿರಲಿಲ್ಲ.  ಆದರೂ ಅವರೊಂದಿಗೆ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. 

ಕೇವಲ 5ನೇ ತರಗತಿ ಕಲಿತಿರುವ ಈತ ಸೆಲ್ ಫೆÇೀನ್ ಬಳಕೆ ಹಾಗೂ ಅತ್ಯಾಧುನಿಕ ಆಪ್ ಒಳಗೊಂಡ ಸೆಲ್ಫೋನ್ ಬಳಕೆಯಲ್ಲಿ ಈತ ಪರಿಣಿತನಾಗಿದ್ದನು.   ದೈನಂದಿನ ತಡರಾತ್ರಿಯ ತನಕವೂ ಫೆÇೀನಲ್ಲಿ ಮಾತನಾಡುತ್ತಲೇ ಇರುತ್ತಿದ್ದನೆಂದು ಈತನ ಜತೆಗಿದ್ದವರು ಪೆÇೀಲೀಸರಿಗೆ ತಿಳಿಸಿದ್ದಾರೆ. ಮನೆಯವರೊಂದಿಗೆ ಮಾತನಾಡುವ ನೆಪದಲ್ಲಿ ಈತ ಉಗ್ರರ ಜತೆ ಸಂವಾದ ನಡೆಸುತ್ತಿದ್ದುದನ್ನು ಅಸ್ಸಾಂ ಎಸ್.ಟಿ.ಎಫ್ ಪತ್ತೆಹಚ್ಚಿತ್ತು..

ಕ್ವಾಟ್ರಸ್ ಕೇಂದ್ರೀಕರಿಸಿ ತನಿಖೆ:

ಉಗ್ರ ಮಹಮ್ಮದ್ ಶಾಬ್‍ಶೇಖ್ ಜಿಲ್ಲೆಯ ನಾನಾ ಕಡೆ ವಾಸಿಸುತ್ತಿದ್ದ ಕ್ವಾಟ್ರಸ್‍ಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಲು ಜಿಲ್ಲೆಯ ಪೊಲೀಸರು ಕ್ರಮ ಆರಂಭಿಸಿದ್ದಾರೆ. ಈತನ ಸಂಪರ್ಕದಲ್ಲಿದ್ದವರನ್ನೂ ಪತ್ತೆಹಚ್ಚಿ ತನಿಖೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.ಈತನ ಜತೆ ನಕಲಿ ವಿಳಾಸದೊಂದಿಗೆ ಇತರ ಬಾಂಗ್ಲಾ ನಿವಾಸಿಗಳು ವಾಸಿಸುತ್ತಿದ್ದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಸ್ಸಾಂ ಎಸ್.ಟಿ.ಎಫ್ ಎನ್.ಐ.ಎ ಸಹಾಯದೊಂದಿಗೆ ಬುಧವಾರ ನಸುಕಿಗೆ ಈತ ವಾಸಿಸುತ್ತಿದ್ದ ಬಾಡಿಗೆ ಕೋಣೆಗೆ ದಾಳಿ ಸಂದರ್ಭ ಕೇರಳ ಸ್ಟೇಟ್ ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಸಿಬಿ ಥಾಮಸ್, ಇನ್‍ಸ್ಪೆಕ್ಟರ್ ಪ್ರಮೋದ್ ಮೊದಲಾದವರು ಜತೆಗಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries