ಮಾಸ್ಕೊ: ಕಳೆದ ವಾರ ರಷ್ಯಾದ ಉನ್ನತ ಮಿಲಿಟರಿ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ ಎಂದು ರಷ್ಯಾದ ಉನ್ನತ ರಕ್ಷಣಾ ಸಂಸ್ಥೆ ಗುರುವಾರ ತಿಳಿಸಿದೆ.
ರಷ್ಯಾದ ಪ್ರಜೆಗಳೇ ಆದ ಆರೋಪಿಗಳು, ಕಾರಿನಲ್ಲಿ ಬಾಂಬ್ ಮತ್ತು ಲಕೋಟೆಯಲ್ಲಿ ಸ್ಫೋಟಕವನ್ನು ಇಟ್ಟು ರಕ್ಷಣಾ ಸಚಿವಾಲಯದ ಇಬ್ಬರು ಉನ್ನತ ಅಧಿಕಾರಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಆರೋಪಿಗಳನ್ನು ಬಂಧಿಸಿರುವುದು ಮತ್ತು ಅವರನ್ನು ವಿಚಾರಣೆ ಮಾಡುತ್ತಿರುವ ವಿಡಿಯೊವನ್ನು ರಕ್ಷಣಾ ಸಂಸ್ಥೆ ಬಿಡುಗಡೆ ಮಾಡಿದ್ದು, ಸಂಚಿಗೆ ಗುರಿಯಾದ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.