HEALTH TIPS

ಕುಸಿದ ಈರುಳ್ಳಿ ದರ: ಹರಾಜು ಸ್ಥಗಿತಗೊಳಿಸಿದ ರೈತರು

ನಾಸಿಕ್‌ : ಮಹಾರಾಷ್ಟ್ರದ ಲಾಸನ್‌ಗಾಂವ್‌ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಈರುಳ್ಳಿ ಬೆಲೆ ಕುಸಿದಿದ್ದರಿಂದ ಕಂಗಾಲಾದ ಬೆಳೆಗಾರರು, ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಾಸಿಕ್‌ ಜಿಲ್ಲೆಗೆ ಸೇರಿರುವ ಲಾಸನ್‌ಗಾಂವ್‌ ದೇಶದ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಯಾಗಿದೆ.

ಕರ್ನಾಟಕ, ದೆಹಲಿ ಸೇರಿ ವಿವಿಧೆಡೆಗೆ ಇಲ್ಲಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತದೆ. ಇಲ್ಲಿನ ಬೆಲೆಯು ಇತರೆ ರಾಜ್ಯಗಳ ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಕೆಲವು ದಿನಗಳಿಂದ ಈರುಳ್ಳಿ ದರವು ಇಳಿಕೆಯ ಹಾದಿ ಹಿಡಿದಿದೆ. ಮಂಗಳವಾರ 1,689 ವಾಹನಗಳಲ್ಲಿ ರೈತರು ಈರುಳ್ಳಿಯನ್ನು ಮಾರಾಟಕ್ಕೆ ತಂದಿದ್ದರು. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹1,000 ಹಾಗೂ ಗರಿಷ್ಠ ₹3,252 ದರವಿದ್ದರೆ, ಸರಾಸರಿ ದರ ₹2,200 ಇತ್ತು.

ಬೆಳಿಗ್ಗೆ 1,500ಕ್ಕೂ ವಾಹನಗಳಲ್ಲಿ ಈರುಳ್ಳಿಯನ್ನು ಮಾರಾಟಕ್ಕೆ ತರಲಾಗಿತ್ತು. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹800 ಹಾಗೂ ಗರಿಷ್ಠ ₹2,900 ದರವಿತ್ತು. ಸರಾಸರಿ ದರ ₹1,900 ಆಗಿತ್ತು ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಹರಾಜು ಆರಂಭವಾಗುತ್ತಿದ್ದಂತೆ ಖರೀದಿದಾರರು ಕ್ವಿಂಟಲ್‌ಗೆ ₹1,200ರಿಂದ ₹1,500 ದರ ನಿಗದಿಪಡಿಸಿದ್ದರಿಂದ ರೈತರ ಆಕ್ರೋಶ ಭುಗಿಲೆದ್ದಿತು. ಹರಾಜು ಪ್ರಕ್ರಿಯೆಯನ್ನು ದಿಢೀರ್‌ ಸ್ಥಗಿತಗೊಳಿಸಿದರು. ಬಳಿಕ ಅಲ್ಪಮಟ್ಟಿಗೆ ಬೆಲೆ ಏರಿಕೆ ಕಂಡಿತು. ಆಗ ರೈತರು ಹೋರಾಟ ಹಿಂಪಡೆದಿದ್ದರಿಂದ ಹರಾಜು ಪ್ರಕ್ರಿಯೆಯು ಮುಂದುವರಿಯಿತು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈರುಳ್ಳಿ ಮೇಲೆ ಶೇ 20ರಷ್ಟು ಕನಿಷ್ಠ ರಫ್ತು ದರ ವಿಧಿಸಿದೆ. ಇದನ್ನು ಕೂಡಲೇ ಹಿಂಪಡೆಯಬೇಕು. ಪ್ರತಿ ಕ್ವಿಂಟಲ್‌ಗೆ ₹1,000ದಿಂದ ₹1,200 ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಫ್ತು ದರ ಕಡಿತ: ಕೇಂದ್ರಕ್ಕೆ ಪತ್ರ

ದರ ಕುಸಿತದ ಬೆನ್ನಲ್ಲೇ ಈರುಳ್ಳಿ ಮೇಲಿನ ಕನಿಷ್ಠ ರಫ್ತು ದರವನ್ನು ಹಿಂಪಡೆಯುವಂತೆ ಕೋರಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ‍ಪವಾರ್‌ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ. 'ಲಾಸನ್‌ಗಾಂವ್‌ನಿಂದ ದೇಶದ ಇತರೆ ರಾಜ್ಯಗಳು ಮತ್ತು ವಿದೇಶಕ್ಕೆ ಈರುಳ್ಳಿ ಪೂರೈಕೆಯಾಗುತ್ತದೆ. ಬೇಸಿಗೆ ಅವಧಿಯಲ್ಲಿ ಈರುಳ್ಳಿ ಇಳುವರಿ ಕುಸಿದಿತ್ತು. ಈಗ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಹೊಸ ಸರಕು ಆವಕವಾಗುತ್ತಿದೆ. ಇದರಿಂದ ರೈತರು ಮಾರಾಟದ ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಗೆ ಕೇಂದ್ರವು ಕನಿಷ್ಠ ಬೆಂಬಲ ಬೆಲೆ ಸೌಲಭ್ಯ ಕೂಡ ಕಲ್ಪಿಸಿಲ್ಲ' ಎಂದು ಹೇಳಿದ್ದಾರೆ. ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಲಭಿಸಿದರೆ ಅವರಿಗೆ ಉತ್ಪಾದನಾ ವೆಚ್ಚವೂ ಕೈಸೇರುವುದಿಲ್ಲ ಎಂದು ಹೇಳಿದ್ದಾರೆ. ಈರುಳ್ಳಿ ಮೇಲೆ ವಿಧಿಸಿರುವ ರಫ್ತು ದರದಿಂದ ಮಹಾರಾಷ್ಟ್ರವು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಇದನ್ನು ವಾಪಸ್‌ ಪಡೆಯಬೇಕು ಎಂದು ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries