ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ 2025 ಮಾರ್ಚ್ 01 ರಿಂದ 09ರ ತನಕ ಜರಗಲಿರು ಬ್ರಹ್ಮಕಲಶೋತ್ಸವದ ಲಾಂಛನವನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಉದ್ಯಮಿ ಮಧುಸೂದನ ಆಯರ್ ಭಾನುವಾರ ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರದಲ್ಲಿ ಜರಗಿದ ಸಮಾರಂಭದಲ್ಲಿ ಕುಂಜರಕಾನ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ಟರ್ ಕಾರ್ಮಾರು, ಟ್ರಸ್ಟಿ ಗೋಪಾಲ್ ಭಟ್ ಪಿ ಎಸ್ ಪಟ್ಟಾಜೆ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಕಾರ್ಯಧ್ಯಕ್ಷ ರಾಮ ಕೆ. ಕಾರ್ಮಾರು, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಪಂಚಾಯತಿ ಜನಪ್ರತಿನಿಧಿ ಶ್ಯಾಮ್ ಪ್ರಸಾದ್ ಮಾನ್ಯ, ಟ್ರಸ್ಟಿಗಳಾದ ರಾಧಾಕೃಷ್ಣ ರೈ ಕಾರ್ಮಾರು, ನವೀನ್ ಚಂದ್ರ ಪಿ ಕೆ, ಮಹಿಳಾ ವೃಂದದ ಕಾರ್ಯದರ್ಶಿ ಸರಸ್ವತಿ ಕಾರ್ಮಾರು, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ರಂಜಿತ್ ಯಾದವ್ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿ, ಯುವಕ ವೃಂದದ ಅಧ್ಯಕ್ಷ ವಿಜಯ್ ಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.