ಬದಿಯಡ್ಕ : ಕಾಸರಗೋಡು ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಬದಿಯಡ್ಕ ವಳಮಲೆ ಇರಾ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ್ದು, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ. 2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಹಿಳಾ ಜ್ಞಾನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಲ್ಲಾದ ಬದಲಾವಣೆಗಳು, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಸೇರಿದಂತೆ ಹಲವು ಮಾರ್ಗದರ್ಶನಗಳನ್ನು ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಾಮಾಜಿಕ ಕಾರ್ಯಕರ್ತೆ ಆಯಿಷಾ ಪೆರ್ಲ, ಕೇಂದ್ರ ಒಕ್ಕೂಟದ ಅಧ್ಯಕ್ಷ ಜ್ಞಾನೇಶ್ ಆಚಾರ್ಯ ಶುಭ ಹಾರೈಸಿದರು. ನೀರ್ಚಾಲು ಒಕ್ಕೂಟದ ಅಧ್ಯಕ್ಷೆ ಶಿವಾನಿ ಅಧ್ಯಕ್ಷತೆ ವಹಿಸಿದ್ದರು. ಈ ಗಂಗಾಧರ ಸಾಂಸ್ಕøತಿಕ ಪ್ರತಿμÁ್ಠನದ ಅಧ್ಯಕ್ಷ ಗಂಗಾಧರ್ ಆಳ್ವ ಉಪಸ್ಥಿತರಿದ್ದರು. ಕೇಂದ್ರದ ಸದಸ್ಯರಿಗೆ ಆಯೋಜಿಸಲಾದ ಮೂರು ತಿಂಗಳ ಟೈಲರಿಂಗ್ ತರಬೇತಿಯಲ್ಲಿ ತರಬೇತಿ ಪಡೆದ ಸದಸ್ಯರನ್ನು ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಹಿರಿಯ ಶಿಕ್ಷಕಿ ಅನಿತಾ ಕುಮಾರಿ ‘ಮಹಿಳೆಯ ಕೌಟುಂಬಿಕ ಜೀವನದೊಂದಿಗೆ ವೃತ್ತಿ ಬದುಕು' ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಸಿಕೊಟ್ಟರು. ಕೇಂದ್ರದ ಸದಸ್ಯರಿಗೆ ರಂಗೋಲಿ, ಹೂಗುಚ್ಛ, ಹೂಮಾಲೆ ತಯಾರಿ ಹಾಗೂ ನೃತ್ಯ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರನ್ನು ಬಹುಮಾನ ನೀಡಿ ಅಭಿನಂದಿಸಲಾಯಿತು. ತಾಲೂಕು ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ, ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯಾ ಹಾಗೂ ನಿರ್ಚಾಲು ಜ್ಞಾನವಿಕಾಸ ಕೇಂದ್ರದ ಸದಸ್ಯೆ ಸಂಧ್ಯಾ ನಿರೂಪಿಸಿದರು.