ಪೆರ್ಲ: ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಏಳು ಶಿಬಿರದ ಅಂಗವಾಗಿ ಆರೋಗ್ಯ ಹಾಗೂ ಸ್ವಚ್ಛತೆ ವಿಷಯದಲ್ಲಿ ತರಗತಿ ನಡೆಯಿತು. ಕುಟುಂಬ ಆರೋಗ್ಯ ಕೇಂದ್ರದ ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ ಪಿ.ಸೌಮ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜೀವನ ಶೈಲಿ ರೋಗಗಳು ಹಾಗೂ ತಡೆಗಟ್ಟುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ.ಕಾರ್ಯಕ್ರಮ ಸಂಯೋಜಿಸಿದರು. ಭೂಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕಿ ನವ್ಯಶ್ರೀ, ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕಿ ಅನುಪಮ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಭವ್ಯ , ಕಚೇರಿ ಸಿಬ್ಬಂದಿ ಶೋಭಾ ಉಪಸ್ಥಿತರಿದ್ದರು.