ಉದಾರೀಕರಣದ ಹರಿಕಾರ ಮನಮೋಹನ್ ಸಿಂಗ್ ಅವರ ಜೀವನದ ಪ್ರಮುಖ ಹೆಜ್ಜೆಗುರುತುಗಳ ಪಟ್ಟಿ ಇಲ್ಲಿದೆ...
* 1932 ಸೆಪ್ಟೆಂಬರ್ 26ರಂದು ಪಂಜಾಬ್‌ನಲ್ಲಿ ಜನನ
* ಅಮೃತಸರದ ಹಿಂದೂ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ
* ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ (1952) ಹಾಗೂ ಸ್ನಾತಕೋತ್ತರ ಪದವಿ (1954)
ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ 1957ರಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ
* ಆಕ್ಸ್‌ಫರ್ಡ್ ವಿ.ವಿಯಿಂದ 1962ರಲ್ಲಿ ಅರ್ಥಶಾಸ್ತ್ರದಲ್ಲಿ ಡಿ.ಫಿಲ್
* ಪಂಜಾಬ್ ವಿಶ್ವವಿದ್ಯಾಲಯ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕೆಲಕಾಲ ಬೋಧನೆ
* 1971ರಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ನೇಮಕ
* 1972ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರನ ಹುದ್ದೆಗೆ ಬಡ್ತಿ
* ವಿಶ್ವಸಂಸ್ಥೆಯ ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ ಸೆಕ್ರೆಟರಿಯೇಟ್‌ನಲ್ಲಿ (ಯುಎನ್‌ಸಿಟಿಎಡಿ) ಅಲ್ಪ ಅವಧಿಗೆ ಕೆಲಸ
* 1987ರಿಂದ 1990ರವರೆಗೆ ಜಿನೀವಾದ ಸೌತ್ ಕಮಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ
* 1982ರ ಸೆಪ್ಟೆಂಬರ್ 16ರಿಂದ 1985ರ ಜನವರಿ 14ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿ ಕೆಲಸ
* ಹಣಕಾಸು ಸಚಿವಾಲಯದ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಅವರ ಸಲಹೆಗಾರ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಣೆ
* 1991ರಲ್ಲಿ ಮೊದಲ ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ; 1995, 2001, 2007, 2013 ಮತ್ತು 2019ರಲ್ಲಿ ರಾಜ್ಯಸಭೆಗೆ ಮರು ಆಯ್ಕೆಯಾದರು. ರಾಜ್ಯಸಭೆಯಲ್ಲಿ ಅವರ 33 ವರ್ಷಗಳ ಅವಧಿ ಈ ವರ್ಷ ಏಪ್ರಿಲ್‌ನಲ್ಲಿ ಕೊನೆಗೊಂಡಿತು
* ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಣೆ
* 1998ರಿಂದ 2004ರ ವರೆಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಹುದ್ದೆ
* 2004ರ ಮೇ 22ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
* 2009ರ ಮೇ 22ರಂದು ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆ
ಪ್ರಶಸ್ತಿಗಳು
ಪದ್ಮವಿಭೂಷಣ (1987), ವರ್ಷದ ಹಣಕಾಸು ಸಚಿವರಿಗೆ ನೀಡುವ 'ಯೂರೊ ಮನಿ ಅವಾರ್ಡ್' (1993 ಮತ್ತು 1994) ಇಂಡಿಯನ್ ಸೈನ್ಸ್ ಕಾಂಗ್ರೆಸ್ ನೀಡುವ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪುರಸ್ಕಾರ (1995)