ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2025 ಮಾರ್ಚ್ 27 ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗಾಗಿ ಮಧೂರು ಸನಿಹದ ಏರಿಕ್ಕಳ ವಯನಾಡು ಕುಲವನ್, ರಕ್ತೇಶ್ವರೀ ನಾಗಬನದ ಮುಂಭಾಗದಲ್ಲಿರುವ ಬಯಲಿನಲ್ಲಿ ಬೆಳೆಸಿದಂತಹ ಸಾವಯವ ಭತ್ತದ ಕೃಷಿಯ ಕಟಾವು ಬುಧವಾರ ನಡೆಯಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಭತ್ತದ ಕಟಾವಿಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ-ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಊರ ಪರವೂರ ಭಕ್ತ ಮಹಾಶಯರ ಉಪಸ್ಥಿತಿಯಲ್ಲಿ ಏರಿಕ್ಕಳ ಭತ್ತದ ಬಯಲಿನಲ್ಲಿ ಕಟಾವು ಕಾರ್ಯಕ್ರಮ ನಡೆಯಿತು. ಏರಿಕ್ಕಳದ ಭತ್ತದ ಬಯಲಿನಲ್ಲಿ ಸೆ. 10ರಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಗದ್ದೆ ನಾಟಿ ಮಾಡಲಾಗಿತ್ತು.