HEALTH TIPS

ಬೆಳ್ಳೂರಿನಲ್ಲಿ ಅಬಾಲ ವೃದ್ಧರ ಮನ ಗೆದ್ದ ಸಂಸ್ಕøತಿ ಚೆಸ್ ಟೂರ್ನಮೆಂಟ್ ಗೆ ಜನ ಸಾಗರ

ಮುಳ್ಳೇರಿಯ: ಎಳೆಯ ಮಕ್ಕಳಿಂದ ಹಿಡಿದು ವಯೋಜನರವರೆಗೆ ಎಲ್ಲಾ ವಿಭಾಗದವರು ಪಾಲ್ಗೊಂಡ ಅಂತರಾಜ್ಯ ಮಟ್ಟದ ಚೆಸ್ ಟೂರ್ನಮೆಂಟ್ ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಜರಗಿತು. ಗ್ರಾಮೀಣ ಪ್ರದೇಶವಾದ ಇಲ್ಲಿ ಅತ್ಯಾಪೂರ್ವವಾಗಿ ಬದಿಯಡ್ಕದ ಮಾಸ್ಟರ್ ಚೆಸ್ ಅಕಾಡೆಮಿ ಸಂಸ್ಕೃತಿ ಚೆಸ್ ಸ್ಪರ್ಧೆ  ಸೀಸನ್ -1ನ್ನು ಆಯೋಜಿಸಿದ್ದು ಜನ ಸಾಗರ ಕುತೂಹಲಭರಿತರಾಗಿ ಭಾಗವಹಿಸಿದ್ದರು.  


ಮಾಸ್ಟರ್ ಚೆಸ್ ಅಕಾಡೆಮಿ ಪ್ರಶಾಂತ್ ಮುಳ್ಳಂಕೊಚ್ಚಿ ಅವರ ನೇತೃತ್ವದಲ್ಲಿ  ಶಶೀಂದ್ರ ಮವ್ವಾರು ಇವರ ಸಂಘಟನಾ ಸಂಯೋಜನೆಯಂತೆ ಸ್ಪರ್ಧೆ ಜರಗಿತ್ತು. ಮಹಾಭಾರತ ಕಾಲದಿಂದಲೇ ಅಖಂಡ ಭಾರತದಲ್ಲಿ ಚೆಸ್ ಎಂಬ ಚದುರಂಗದಾಟ ಜನಪ್ರಿಯವಾಗಿದ್ದು ಇದು ಬೌದ್ಧಿಕ ಚಿಂತನ ಶೀಲತೆ ಮತ್ತು ಪ್ರತಿಭೆ ಬಯಸುವ ಆಟವಾಗಿದ್ದು ಎಳೆಯ ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಂಡರೆ ಅವರ ಕೌಶಲ್ಯಾಭಿವೃದ್ಧಿಯಾಗುತ್ತದೆ ಎಂದು ಭಾಗವಹಿಸಿದ ಚೆಸ್ ಸಾಧಕರು ಅಭಿಪ್ರಾಯ ಪಟ್ಟಿದ್ದಾರೆ. ಸ್ಪರ್ಧೆಯು ಅಂಡರ್ 9, 12, 15 ಎಂಬೀ ವಿಭಾಗಗಳಲ್ಲಿ ಹಾಗೂ ಒಪನ್ ಕೆಟಗೆರಿಯಲ್ಲಿಯೂ  ನಡೆದಿತ್ತು.ಪಂದ್ಯಾಟವನ್ನು ಹಿರಿಯ ಚೆಸ್ ಆಟಗಾರ ಶ್ರೀರಾಮನ್ ನಂಬೂದಿರಿ ಉದ್ಘಾಟಿಸಿದರು. ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ್,ಉಡುಪಿ ಜಿಲ್ಲಾ ಅಸೋಸಿಯೇಷನ್ ನ ಉಮಾಕಾಂತ್, ಕರ್ನಾಟಕ ಚೆಸ್ ಅಸೋಸಿಯೇಷನ್ ನ ಕಾರ್ಯದರ್ಶಿ  ರಮೇಶ್ ಕೋಟೆ, ರಾಜೇಶ್ ವಿ.ಎನ್ ಮೊದಲಾದವರು ಉಪಸ್ಥಿತರಿದ್ದರು.

ಅಂತರ್ ರಾಷ್ಟ್ರೀಯ ಚೆಸ್ ಪ್ರತಿಭೆ ಸಾಕ್ಷತ್ ಉಡುಪಿ ಮುಖ್ಯ ಅರ್ಬಿಟ್ ಆಗಿದ್ದರು.  ಚೆಸ್ ತರಬೇತುದಾರ ಕುಂಞಂಬು ಇತರರು ಸಹಕರಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries