ಕುಂಬಳೆ : ಇಲ್ಲಿನ ನಾಯ್ಕಾಪು ನಾರಾಯಣಮಂಗಲ ಶ್ರೀ ಚೀರುoಬಾ ಭಗವತೀ ಕ್ಷೇತ್ರದಲ್ಲಿ ಐದು ವರ್ಷಗಳಿಗೊಮ್ಮೆ ಜರಗುವ ಮಹಾ ನಡಾವಳಿ ಮಹೋತ್ಸವ 2025 ರ ಫೆಬ್ರವರಿ 27 ರಿಂದ ಮಾರ್ಚ್ ಎರಡರ ವರೆಗೆ ನಾಲ್ಕು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರಗಲಿದೆ. ಉತ್ಸವದ ಯಶಸ್ವಿಗಾಗಿ ನಡಾವಳಿ ಉತ್ಸವ ಸಮಿತಿ ಹಾಗೂ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಪ್ರವೃತ್ತವಾಗಿವೆ.
ಉತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ಅತ್ತಾವರ ಹಾಗೂ ಪ್ರಧಾನ ಸಂಚಾಲಕರಾಗಿ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಯಿತು. ಸಮಿತಿ ರಕ್ಷಾಧಿಕಾರಿಗಳಾಗಿ ಉಳಾಲು ಬೀಡು ಪ್ರಕಾಶ್ ಕಡಮಣ್ಣಾಯ, ಚಂದ್ರಶೇಖರ ಎಳೆ ಚೆಟ್ಟಿಯಾರ್, ಬಿ.ಶಂಕರ ದೇವಾಡಿಗ ಅಣಂಗೂರು, ಕುಞÂ್ಞ ಕೃಷ್ಣ ಮಾಸ್ತರ್ ಅಂಗಡಿಮೊಗರು, ಗೋಪಾಲಕೃಷ್ಣ ಮಾಸ್ತರ್ ಬದಿಯಡ್ಕ, ರಾಮಚಂದ್ರ ಚೆಟ್ಟಿಯಾರ್ ಸೋಮೇಶ್ವರ, ಡಾ.ನಾರಾಯಣ ಬೆಂಗಳೂರು, ಗೌರವಾಧ್ಯಕ್ಷರಾಗಿ ಡಾ.ಮೋಹನ್ ದಾಸ್ ಬೆಂಗಳೂರು, ಖಜಾಂಜಿಯಾಗಿ ಉದಯಕುಮಾರ್ ಕೂಡ್ಲು, ಉಪಾಧ್ಯಕ್ಷರಾಗಿ ವಿಶ್ವನಾಥ ನಾರಾಯಣಮಂಗಲ, ಕಾರ್ಯದರ್ಶಿಯಾಗಿ ದಿನೇಶ್ ಕುಂಟಂಗೇರಡ್ಕ ಸಹಿತ ವಿವಿಧ ಉಪಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.